ಕಾಸರಗೋಡು: ಕೋವಿಡ್ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಸರಗೋಡು ಆರ್ಟಿಸನ್ಸ್ ಡೆವಲಪ್‍ಮೆಂಟ್ ಅ್ಯಂಡ್ ವೆಲ್ಪೇರ್ ಕೋ ಓಪರೇಟಿವ್ ಸಂಘದ ಆಶ್ರಯದಲ್ಲಿ ಸಮಾಜದ ನಿರ್ಗತಿಕ ಕುಟುಂಬಗಳಿಗೆ ಅಹಾರ ಸಾಮಗ್ರಿ ಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರುಗಳಾದ ವಿ.ವಿ.ಚಂದ್ರನ್, ರಾಘವನ್ ದೊಡ್ಡವಯಲ್, ಪಿ.ಕೆ.ವಿಜಯನ್, ಎ.ರಾಘವನ್ ಕೊಳತ್ತೂರು, ರಾಜನ್ ಮನ್ನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯ ರಾಜನ್ ಸ್ವಾಗತಿಸಿದರು. ಹರ್ಷಿತ ಎ. ವಂದಿಸಿದರು.


