ಕಾಸರಗೋಡು: ಟಾಟಾ ಗ್ರೂಪ್‍ನ ಕೋವಿಡ್ ಆಸ್ಪತ್ರೆಯ ನಿರ್ಮಾಣವು ಸಮರೋಪಾದಿಯಲ್ಲಿ ಸಾಗುತ್ತಿದೆ. ಮಳೆ ಬಿರುಸುಗೊಳ್ಳದಿದ್ದರೆ ಜುಲೈ ಮಧ್ಯದ ವೇಳೆಗೆ ಆಸ್ಪತ್ರೆ ಸಿದ್ಧವಾಗಲಿದೆ. ಇಲ್ಲದಿದ್ದರೆ, ಆಗಸ್ಟ್ ಆರಂಭದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧಗೊಳ್ಳುವುದು. ಆಸ್ಪತ್ರೆಯು ಪ್ರಿಫ್ಯಾಬ್ ಮಾದರಿಯಲ್ಲಿ 541 ಹಾಸಿಗೆಗಳ ಆಸ್ಪತ್ರೆ ವ್ಯವಸ್ಥೆ ಸಿದ್ದಗೊಳ್ಳುತ್ತಿದೆ. ಕೋವಿಡ್ ಹರಡುತ್ತಿರುವ ತುರ್ತು ಸಂದರ್ಭದಲ್ಲಿ ಅದರ ಚಿಕಿತ್ಸೆಗೆಂದೇ ಈ ಆಸ್ಪತ್ರೆ ನಿರ್ಮಾಣಗೊಳಿಸಲಾಗಿದ್ದರೂ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ.
ಕೋವಿಡ್ ನಿರೀಕ್ಷಣೆ ಮತ್ತು ಕ್ವಾರಂಟೈನ್ ಗಾಗಿ ವಿಶೇಷ ವ್ಯವಸ್ಥೆಗಳಿರುವ ಈ ಆಸ್ಪತ್ರೆಯ ನಿರ್ಮಾಣವು ತೆಕ್ಕಿಲ್ ಪರಿಸರದಲ್ಲಿ ಸ್ಥಳೀಯರಿಗೆ ಕುತೂಹಲ ನೀಡಿದೆ. ಆಸ್ಪತ್ರೆಯ ನಿರ್ಮಾಣವ ನಿರ್ವಹಣೆಯು ಟಾಟಾ ಸಮೂಹದ ತಜ್ಞರ ತಂಡವು ಮುನ್ನಡೆಸುತ್ತಿದೆ. 61 ಸ್ಟೀಲ್ ಕಂಟೇನರ್ ಘಟಕಗಳನ್ನು ಶುಕ್ರವಾರದವರೆಗೆ ಸ್ಥಾಪಿಸಲಾಗಿದೆ. ದೇಶದ ವಿವಿಧ ಟಾಟಾ ಸ್ಟೀಲ್ ಪ್ಲಾಂಟ್‍ಗಳ ಕಂಟೇನರ್‍ಗಳೊಂದಿಗೆ 20 ಟ್ರೇಲರ್‍ಗಳನ್ನು ಕಾಸರಗೋಡಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳುವ ರಸ್ತೆಯನ್ನು ವಿಶೇಷವಾಗಿ ನಿರ್ಮಿಸಲಾಗಿರುವುದರಿಂದ, ಟ್ರೇಲರ್‍ಗಳನ್ನು ಎಂಐಸಿ ಕಾಲೇಜು ರಸ್ತೆಯ ಉದ್ದಕ್ಕೂ ಯೋಜನಾ ಸ್ಥಳಕ್ಕೆ ಸಾಗಿಸಲಾಗುತ್ತಿದೆ. ಆಸ್ಪತ್ರೆಯನ್ನು 128 ಸ್ಟೀಲ್-ಫ್ರೇಮ್ಡ್ ಫ್ಯಾಬ್ರಿಕೇಟೆಡ್ ಕಂಟೇನರ್‍ಗಳಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ ತಯಾರಾದ ಐದು ಎಕರೆ ಕ್ಷೇತ್ರವು ಮೂರು ವಲಯಗಳಾಗಿ ವಿಂಗಡಿಸಿ ಕಾಮಗಾರಿ ಆಧುನಿಕ ವಿಧಾನಗಳೊಮದಿಗೆ ನಡೆಯುತ್ತಿದೆ.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಇರಲಿದೆ. ಜೋಡಿಸುವ ಒಂದೊಂದು ಕಂಟೈನರ್ ಗಳಲ್ಲಿ ಐದು ಹಾಸಿಗೆಗಳು, ವೈದ್ಯರು ಮತ್ತು ದಾದಿಯರಿಗೆ ಒಂದು ಕೊಠಡಿ, ಮತ್ತು ಶೌಚಾಲಯ ಇರುತ್ತದೆ. ಆಸ್ಪತ್ರೆಯಿಂದ ರಾಸಾಯನಿಕಗಳ ವಿಲೇವಾರಿಗೆ ಜೈವಿಕ ಡೀಸೆಲ್ ಟ್ಯಾಂಕ್ ಮತ್ತು ನಾಲ್ಕು ಕೊಳವೆ ಬಾವಿಗಳನ್ನು ಅಳವಡಿಸಲಾಗುವುದು. ಆಸ್ಪತ್ರೆ ಸಂಕೀರ್ಣದ ಸುತ್ತಲೂ ಬೃಹತ್ ಬೇಲಿ ನಿರ್ಮಿಸಲಾಗುವುದು. ವಿದ್ಯುತ್ ಸೌಕರ್ಯಗಳಿಗಾಗಿ ಪ್ರತ್ಯೇಕ ಟ್ರಾನ್ಸ್‍ಫಾರ್ಮರ್ ಇರಿಸುವ ಕೆಲಸವೂ ನಡೆಯುತ್ತಿದೆ.


