ಕಾಸರಗೋಡು: ಸರಳ,ಸುಲಲಿತ,ಆಕರ್ಷಕವಾಗಿ ಗಡಿನಾಡ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕಳಿಕೆ ನಡೆಸುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಶಿಕ್ಷಣಾಲಯಗಳು ಆರಂಭಗೊಳ್ಳದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶಿಕ್ಷಣ ಪ್ರಕ್ರಿಯೆಯಯನ್ನು ಆನ್ ಲೈನ್ ಮೂಲಕ ನಡೆಸುತ್ತಿದ್ದು, ಕನ್ನಡ ಮಾಧ್ಯಮದಲ್ಲೂ ಈಗ ಆಕರ್ಷಕ ಕಲಿಕೆಗೆ ಸೌಲಭ್ಯ ಒದಗಿಸಿರುವುದು ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅನುಗ್ರಹಕಾರಕವಾಗಿದೆ.
ಲಾಕ್ ಡೌನ್ ಅಧಿಯಲ್ಲಿ ಒಂದೇ ಒಂದು ಶೈಕ್ಷಣಿಕ ದಿನವೂ ಪೆÇೀಲಾಗದಂತೆ ಯಥಾ ಅವಧಿಯಲ್ಲಿ ತರಗತಿಗಳನ್ನು ಆನ್ ಲೈನ್ ಮೂಲಕ ಒದಗಿಸುವಲ್ಲಿ ಜಗತ್ತಿನ ಗಮನ ಸೆಳೆಯಲಾಗುತ್ತಿದೆ. ಕೈಟ್ ಕಾಸರಗೋಡು ಸಂಸ್ಥೆಯ ಯೂಟ್ಯೂಬ್ ಮೂಲಕ ಮತ್ತು ಕೇಬಲ್ ನೆಟ್ ವರ್ಕ್ ಮೂಲಕ ಈ ತರಗತಿಗಳ ಪ್ರಸಾರ ನಡೆಯುತ್ತಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಈ ಆನ್ ಲೈನ್ ತರಗತಿಗಳ ಬಗ್ಗೆ ಉತ್ತಮ ಅಭಿಮತ ಹೊಂದಿದ್ದಾರೆ. ಕೈಟ್ ಕಾಸರಗೋಡು ಆರಂಭಿಸಿರುವ www,youtube/c/kitekasaragod ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಮತ್ತು ಕೇರಳ ವಿಷನ್ ಕೇಬಲ್ ಟೀವಿ ನೆಟ್ ವರ್ಕ್ ನ 620 ನಂಬ್ರ ಚಾನೆಲ್ ಮೂಲಕ ತರಗತಿಗಳು ಈಗ ಲಭಿಸುತ್ತಿವೆ. ಆಯಾ ದಿನದ ತರಗತಿಗಳ ಪಟ್ಟಿ(ದಿನಚರಿ) ಹಿಂದಿನ ದಿನವೇ ಲಭಿಸುತ್ತಿದೆ. ಇಂಗ್ಲೀಷ್, ಸಂಸ್ಕøತ, ಉರ್ದು, ಅರೆಬಿಕ್ ಹೊರತುಪಡಿಸಿ ಇತರ ಎಲ್ಲ ವಿಷಯಗಳಲ್ಲೂ ತರಗತಿ ನಡೆಯುತ್ತಿದೆ. ಈ ವಿಷಯಗಳ ತರಗತಿ ವಿಕ್ಟರ್ಸ್ ಚಾನೆಲ್ ನಲ್ಲಿ ಒದಗಿಸಲಾಗುತ್ತಿದೆ. ಯೂಟ್ಯೂಬ್ ಚಾನೆಲ್ ಮತ್ತು ಕೇಬಲ್ ನೆಟ್ ವರ್ಕ್ ನಲ್ಲಿ ಬೆಳಗ್ಗೆ 10.30ರಿಂದ ಸಂಜೆ 4.30 ವರೆಗೆ ಆನ್ ಲೈನ್ ತರಗತಿ ನಡೆಯುತ್ತಿದೆ. ಅಣಂಗೂರಿನ ಕೈಟ್ ಕಚೇರಿಯಲ್ಲಿ ಮತ್ತು ಮಾಯಿಪ್ಪಾಡಿ ಡಯಟ್ ನಲ್ಲಿ ತರಗತಿಗಳ ಚಿತ್ರೀಕರಣ ನಡೆಯುತ್ತಿವೆ ಎಂದು ಕೈಟ್ ಜಿಲ್ಲಾ ಸಂಚಾಲಕ ಎಂ.ಪಿ.ರಾಜೇಶ್ ತಿಳಿಸಿರುವರು.


