ಕಾಸರಗೋಡು: ರಾಜ್ಯದಲ್ಲಿ ಕಳೆದ ಐದು ದಿನಗಳಿಂದ ಸತತವಾಗಿ ಕೋವಿಡ್ ಬಾಧಿತರ ಸಂಖ್ಯೆ ನೂರರ ಗಡಿ ದಾಟಿ ನಾಗಾಲೋಟದಲ್ಲಿ ಸಾಗುತ್ತಿದ್ದು ದ್ವಿಶತಕದ ಭೀತಿ ಎದುರಿಸುತ್ತಿದೆ. ಇಂದು(ಮಂಗಳವಾರ) ಒಂದೇ ದಿನ 141 ಸೋಂಕು ಬಾಧಿತರು ಪತ್ತೆಯಾಗುವ ಮೂಲಕ ಸಾಮೂಹಿಕ ಹರಡುವಿಕೆಯ ಭೀತಿಗೆ ಕಾರಣವಾಗಿದೆ.
ಸಮಧಾನವೆಂಬಂತೆ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಯಾರಿಗೂ ಕೋವಿಡ್ ಪಾಸಿಟಿವ್ ಆಗಿಲ್ಲ. ಹಲವು ದಿನಗಳ ನಂತರ ಮಂಗಳವಾರ ಜಿಲ್ಲೆಗೆ ಸಮಾಧಾನದ ದಿನವಾಗಿದೆ.
ಜಿಲ್ಲೆಯಲ್ಲಿ 5193 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 4807 ಮಂದಿ ಆಸ್ಪತ್ರೆಗಳಲ್ಲಿ, 386 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ 504 ಮಂದಿ ನಿಗಾದಲ್ಲಿ ಸೇರಿದ್ದಾರೆ. ಸೆಂಟಿನಲ್ ಸರ್ವೇ ಸಹಿತ ನೂತನವಾಗಿ 50 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 281 ಮಂದಿಯ ಫಲಿತಾಂಶ ಲಭಿಸಿಲ್ಲ. 210 ಮಂದಿ ಮಂಗಳವಾರ ನಿಗಾ ಅವ„ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 141 ಮಂದಿಗೆ ಸೋಂಕು :
ರಾಜ್ಯದಲ್ಲಿ ಮಂಗಳವಾರ 141 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 60 ಮಂದಿ ಗುಣಮುಖರಾಗಿದ್ದಾರೆ.
ಕೊಲ್ಲಂ ಮಯ್ಯನಾಡ್ ನಿವಾಸಿ ವಸಂತ ಕುಮಾರ್ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸಾವಿಗೀಡಾದವರ ಸಂಖ್ಯೆ 22ಕ್ಕೇರಿತು.
ರೋಗ ಬಾಧಿತರಲ್ಲಿ 79 ಮಂದಿ ವಿದೇಶದಿಂದ ಬಂದವರು. ಇತರ ರಾಜ್ಯಗಳಿಂದ ಬಂದವರು 52. ಸಂಪರ್ಕದಿಂದ 9 ಮಂದಿಗೆ ರೋಗ ಬಾಧಿಸಿದೆ. ಒಬ್ಬರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ಮಲಪ್ಪುರಂ-11, ಕಲ್ಲಿಕೋಟೆ-6, ಪಾಲ್ಘಾಟ್-27, ಕಣ್ಣೂರು-6, ಎರ್ನಾಕುಳಂ-13, ತೃಶ್ಶೂರು-14, ಪತ್ತನಂತಿಟ್ಟ-27, ಕೋಟ್ಟಯಂ-8, ಕೊಲ್ಲಂ-4, ವಯನಾಡು-2, ತಿರುವನಂತಪುರ-4, ಆಲಪ್ಪುಳ-19 ಎಂಬಂತೆ ರೋಗ ಬಾ„ಸಿದೆ. ಮಲಪ್ಪುರಂ-15, ಕಣ್ಣೂರು-1, ಎರ್ನಾಕುಳಂ-6, ತೃಶ್ಶೂರು-10, ಪತ್ತನಂತಿಟ್ಟ-6, ಕೋಟ್ಟಯಂ-12, ವಯನಾಡು-2, ತಿರುವನಂತಪುರ -3 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 239 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 239 ಕೇಸು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8005 ಕೇಸು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ: 7 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 7 ಕೇಸುಗಳನ್ನು ದಾಖಲಿಸಲಾಗಿದೆ. 7 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ 2, ಮೇಲ್ಪರಂಬ 1, ವಿದ್ಯಾನಗರ 1, ಬೇಕಲ 1, ವೆಳ್ಳರಿಕುಂಡ್ 2 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2691 ಕೇಸುಗಳನ್ನು ದಾಖಲಿಸಲಾಗಿದೆ. 3391 ಮಂದಿಯನ್ನು ಬಂಧಿಸಲಾಗಿದ್ದು, 1159 ವಾಹನಗಳನ್ನು ವಶಪಡಿಸಲಾಗಿದೆ.




