ನವದೆಹಲಿ: ತಮ್ಮ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ನಲ್ಲಿ ಮಾತನಾಡಲು ಆಲೋಚನೆ ಮತ್ತು ವಿಷಯಗಳನ್ನು ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ.
ಈ ತಿಂಗಳ ಮನ್ ಕಿ ಬಾತ್ ಜೂನ್ 28ಕ್ಕೆ ಪ್ರಸಾರವಾಗಲಿದೆ. ಅದಕ್ಕೆ ಇನ್ನು ಎರಡು ವಾರ ಬಾಕಿ ಇರುವಾಗಲೇ ನಿಮ್ಮ ಆಲೋಚನೆಗಳು, ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ಇದರಿಂದ ನನಗೆ ಮತ್ತಷ್ಟು ಹೆಚ್ಚು ವಿಷಯಗಳ ಬಗ್ಗೆ ಮಾತನಾಡಲು ಕಮೆಂಟ್, ಫೆÇೀನ್ ಕಾಲ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಕೋವಿಡ್-19 ಜೊತೆಗೆ ಸಾಕಷ್ಟು ಇನ್ನೂ ಹಲವು ವಿಷಯಗಳು ನಿಮ್ಮ ಬಳಿ ಇರಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಜನರು ಸಲಹೆ, ಅಭಿಪ್ರಾಯಗಳನ್ನು ಯಾವ ರೀತಿ ಕೊಡಬಹುದು ಎಂದು ಸಂಖ್ಯೆಯೊಂದನ್ನು ನೀಡಿದ್ದು ಅದರಲ್ಲಿ ನಾಗರಿಕರು ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಕಳುಹಿಸಬಹುದು.ನಮೊ ಆಪ್ ಅಥವಾ ಮೈಗವಮೆರ್ಂಟ್ ಮೂಲಕ ಸಹ ಕಳುಹಿಸಬಹುದು ಎಂದಿದ್ದಾರೆ.
Your ideas have always been the strength of #MannKiBaat, making it a vibrant platform that showcases the strengths of 130 crore Indians!
Record your message:
Dial 1800-11-7800
Write on:
NaMo App.
MyGov Open Forum. mygov.in/group-issue/in…
4,019 people are talking about this
ಕಳೆದ ತಿಂಗಳ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮುಖ್ಯವಾಗಿ ಕೊರೋನಾ ವೈರಸ್ ವಿರುದ್ಧ ಹೋರಾಟ, ಕೊರೋನಾ ವಾರಿಯರ್ಸ್ ಶ್ರಮ, ಕೊರೋನಾ ಸೋಂಕಿನಿಂದ ಗುಣಮುಖರಾದವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.



