HEALTH TIPS

ಮತ್ತೆ ಬಿಗಿಯಾಗಲಿದೆ ಲಾಕ್​ಡೌನ್​?: ಡಬ್ಲ್ಯುಎಚ್​ಒದಿಂದ ಹೊರಬಿತ್ತು ಆಘಾತಕಾರಿ ಮಾಹಿತಿ

             ಜಿನೀವಾ (ಸ್ವಿಜರ್ಲ್ಯಾಂಡ್): ಜಾಗತಿಕವಾಗಿ ಬಾಧಿಸುತ್ತಿರುವ ಕರೊನಾ ವೈರಸ್​ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು, ಇಡೀ ವಿಶ್ವವೇ ಅಪಾಯಕಾರಿ ಹಂತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಶುಕ್ರವಾರ ಎಚ್ಚರಿಕೆ ನೀಡಿದೆ. ಗುರುವಾರ ಒಂದೇ ದಿನ ಜಾಗತಿಕವಾಗಿ ವರದಿಯಾದ 150,000 ಪ್ರಕರಣಗಳಲ್ಲಿ ಅರ್ಧಕರ್ಧ ಅಮೆರಿಕದಲ್ಲಿ ಪತ್ತೆಯಾಗಿರುವುದು ಭಾರಿ ಕಳವಳಕ್ಕೆ ಕಾರಣವಾಗಿದೆ.
               ಜಿನೀವಾ  ದ ಮುಖ್ಯ ಕಚೇರಿಯಲ್ಲಿ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಡಬ್ಲ್ಯುಎಚ್​ಒದ ಮಹಾ ನಿರ್ದೇಶಕರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ಕರೊನಾ ವೈರಸ್​ ಅತಿ ವೇಗವಾಗಿ ಹರಡುತ್ತಿದೆ. ಇನ್ನು ಮಾರಣಾಂತಿಕವಾಗಿದೆ ಮತ್ತು ಅತಿ ಹೆಚ್ಚು ಮಂದಿ ಇನ್ನು ಇದರ ಸೋಂಕಿಗೆ ಒಳಗಾಗುತ್ತಲೇ ಇದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಜಾಗತಿಕವಾಗಿ 8. 53 ಮಿಲಿಯನ್​ಗೂ ಅಧಿಕ ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ ಎಂದು ಟೆಡ್ರೊಸ್ ತುಂಬಾ ಪರಿಣಾಮಕಾರಿಯಾಗಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರು.
    ಅಮೆರಿಕದಲ್ಲಿ ಪತ್ತೆಯಾಗಿರುವ ಬಹುದೊಡ್ಡ ಸಂಖ್ಯೆಯ ಹೊಸ ಕರೊನಾ ಪ್ರಕರಣಗಳು ದಕ್ಷಿಣ ಏಷ್ಯಾ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಿಂದಲೇ ಬಂದಿವೆ. ಸದ್ಯ ಜಗತ್ತು ಅಪಾಯಕಾರಿ ಹಂತದಲ್ಲಿದೆ. ರೋಗದ ಹರಡುವಿಕೆಯನ್ನು ತಡೆಯಲು ವಿಧಿಸಲಾದ ಲಾಕ್‌ಡೌನ್​ನಿಂದಾಗಿ ದುರ್ಬಲ ಆರ್ಥಿಕ ಪರಿಸ್ಥಿತಿ ಎದುರಾಗಿದೆ. ಆದರೆ ಸಾಂಕ್ರಾಮಿಕ ರೋಗವು ಇನ್ನೂ ದೊಡ್ಡ ಅಪಾಯವನ್ನು ಉಂಟುಮಾಡಿದೆ ಎಂದು ಹೇಳಿದರು.
   ಔಷಧ ಕಂಡು ಹಿಡಿಯುವ ಕಠಿಣ ಹಾದಿ:
       ಅನೇಕ ರಾಷ್ಟ್ರಗಳು ಲಾಕ್​ಡೌನ್​ ಅನ್ನು ಸಡಿಲಗೊಳಿಸಿವೆ. ಇದು ಎರಡನೇ ಹಂತದ ಸೋಂಕಿನ ಭೀತಿಯನ್ನು ತಂದೊಡ್ಡಿದೆ ಎಂದು ಡಬ್ಲ್ಯುಎಚ್​ಒ ತುರ್ತುಪರಿಸ್ಥಿತಿ ತಜ್ಞ ಮೈಕ್​ ರಯಾನ್​ ಎಚ್ಚರಿಸಿದ್ದು, ಸೋಂಕು ತಡೆಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ.
         ಬಹಳ ಎಚ್ಚರಿಕೆಯಿಂದ ಲಾಕ್​ಡೌನ್​ ತೆರವುಗೊಳಿಸಬೇಕು. ಹಂತ-ಹಂತವಾಗಿ ಡೇಟಾ ಆಧಾರದ ಮೇಲೆ ಲಾಕ್​ಡೌಮ್​ ಸಡಿಲಿಕೆ ಕುರಿತು ಎಚ್ಚರಿಕೆ ಹೆಜ್ಜೆ ಇಡಬೇಕಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ, ಕರೊನಾ ವೈರಸ್​ ನಮಗೆ ಸರ್ಪ್ರೈಸ್​ ನೀಡಲಿದೆ ಎಂದು ಎಚ್ಚರಿಸಿದರು.
      ಔಷಧ ಕಂಡುಹಿಡಿಯುವ ಪ್ರಯತ್ನ ಜಾಗತಿಕವಾಗಿ ನಡೆಯುತ್ತಿದೆ. ಅಡ್ಡಪರಿಣಾಮಗಳ ಎಚ್ಚರಿಕೆಯ ಮೇಲ್ವಿಚಾರಣೆಯೊಂದಿಗೆ ದೊಡ್ಡ-ಪ್ರಮಾಣದ ಪರೀಕ್ಷೆಯ ಅಗತ್ಯವಿರುತ್ತದೆ. ಹಾಗೆಯೇ ಔಷಧ ಕಂಡುಹಿಡಿಯುವುದು ಅಸಾಧ್ಯವೇನಿಲ್ಲ. ಆದರೆ, ಇದೊಂದು ತುಂಬಾ ತ್ರಾಸದಾಯಕ ಪ್ರಯಾಣವಾಗಿದೆ. ಔಷಧ ಆದಷ್ಟು ಬೇಗ ಪತ್ತೆಯಾಗುವ ಭರವಸೆ ಇದೆ ಎಂದು ಟೆಡ್ರೊಸ್ ಹೇಳಿದರು. 
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries