ಜೈಪುರ್: ಮಹಾಮಾರಿ ಕೊರೋನಾ ವೈರಸ್ ಗೆ ತಮ್ಮ ಕಂಪನಿ ಔಷಧಿ ಕಂಡು ಹಿಡಿದಿದೆ ಎಂದು ಘೋಷಿಸಿಕೊಂಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಅವರ ಪತಂಜಲಿ ಕಂಪನಿಯ ಸಿಇಒ ಆಚಾರ್ಯ ಬಾಲಕೃಷ್ಣ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಶುಕ್ರವಾರ ರಾಮ್ ದೇವ್ ಹಾಗೂ ಇತರರ ವಿರುದ್ಧ ಜೈಪುರದ ಜ್ಯೋತಿ ನಗರ ಪೆÇಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ರಾಮ್ ದೇವ್, ಆಚಾರ್ಯ ಬಾಲಕೃಷ್ಣ, ಆನುರಾಗ್ ವರ್ಷಣೆ, ನಿಮ್ಸ್ ಬಲಬೀರ್ ಸಿಂಗ್ ತೋಮರ್ ಹಾಗೂ ಅನುರಾತ್ ತೋಮರ್ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೆÇಲೀಸ್ ಉಪ ಆಯುಕ್ತ ಅವಿನಾಶ್ ಪರಶರ್ ಅವರು ಹೇಳಿದ್ದಾರೆ. ಸಾಮಾನ್ಯ ಸೋಂಕು ನಿಯಂತ್ರಣದ ಔಷಧಿಯನ್ನು ಕೊರೋನಾ ಔಷಧಿ ಎಂದು ಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂಬ ಆರೋಪದ ಮೇಲೆ ಈ ಆರು ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕೋವಿಡ್-19 ಚಿಕಿತ್ಸೆಗೆ ಪತಂಜಲಿ ಅಯುರ್ವೇದ ಸಂಸ್ಥೆ ಕೊರೊನಿಲ್ ಔಷಧಿಯನ್ನು ಅಭಿವೃದ್ಧಿಗೊಳಿಸಿರುವುದಾಗಿ ಮಂಗಳವಾರವಷ್ಟೇ ಘೋಷಿಸಿತ್ತು.


