ಬದಿಯಡ್ಕ: ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಮಾನ್ಯ ಕಾರ್ಮಾರು ಪಾಡಶೇಖರ ಸಮಿತಿ(ಗದ್ದೆ ಕೃಷಿ ಸಮಿತಿ) ನೇತೃತ್ವದಲ್ಲಿ ಭತ್ತದ ಬೀಜ ಬಿತ್ತನೆ ಕಾರ್ಯಕ್ರಮ ಬುಧವಾರ ನಡೆಯಿತು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಭತ್ತದ ಬೀಜ ಬಿತ್ತನೆಗೆ ಚಾಲನೆ ನೀಡಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಗತ್ತು ಇಂದು ಮಹಾಮಾರಿ ಕೊರೊನಾದ ಸಂಕಷ್ಟಕ್ಕೊಳಗಾಗಿ ಭವಿಷ್ಯ ತೀವ್ರ ಸ್ವರೂಪದ ಬಡತನಕ್ಕೆ ಕಾರಣವಾಗುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಆಹಾರ ಸ್ವಾವಲಂಬನೆ ಸಾಧಿಸುವತ್ತ ಸುಭಿಕ್ಷ ಯೋಜನೆ ನೆರವಾಗುವುದು. ಸಾಧ್ಯವಾದಷ್ಟು ಭತ್ತ ಸಹಿತ ಆಹಾರೋತ್ಪನ್ನಗಳ ವ್ಯವಸಾಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಝೋನ್, ಜಯರಾಂ, ನಿವೃತ್ತ ಪೋಲೀಸ್ ಅಧಿಕಾರಿ ರಾಧಾಕೃಷ್ಣ, ಉಳ್ಳೋಡಿ ಅಂಚೆ ಕಚೇರಿಯ ಅಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ ಮೊದಲಾದವರು ಉಪಸ್ಥಿತರಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗದ್ದೆ ಸಮಿತಿಯ ಸಂಚಾಲಕ ರಾಧಾಕೃಷ್ಣ ವಂದಿಸಿದರು.


