ಕಾಸರಗೋಡು : ಜಿಲ್ಲಾ ಬಿಜೆಪಿ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆ ರೂಪೀಕರಣದ ಅಂಗವಾಗಿ ನಡೆದ ಒಂದು ತಿಂಗಳ ಬಹುಮುಖೀ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪರಿಣಿತ ರವಿ ಎಡನಾಡು ಎರ್ನಾಕುಳಂ, ದ್ವಿತೀಯ ವಿಶ್ವನಾಥ ನೇರಳಕಟ್ಟೆ, ತೃತೀಯ ಅರುಣ ಎನ್ ಮಂಜೇಶ್ವರ, ಕವನ ಸ್ಪರ್ಧೆಯಲ್ಲಿ ಪ್ರಥಮ ನವೀನಚಂದ್ರ ಅಣಂಗೂರು, ದ್ವಿತೀಯ ಗಾಯತ್ರಿ ಪಳ್ಳತ್ತಡ್ಕ, ತೃತೀಯ ಪರಮೇಶ್ವರ ನಾಯ್ಕ ಬಾಳೆಗುಳಿ ಗಳಿಸಿಕೊಂಡಿದ್ದಾರೆ.
ಸ್ಪರ್ಧಾ ವಿಜೇತರಿಗೆ ಜೂ. 27 ರಂದು ಬೆಳಿಗ್ಗೆ 10.30 ಕ್ಕೆ ಕಾಸರಗೋಡು ವೆಂಕಟರಮಣ ದೇವಾಲಯದ ಬಳಿಯಿರುವ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




