ಕಾಸರಗೋಡು: ಮುಸ್ಲಿಂ ಲೀಗ್ ನೇತಾರ, ಚಂದ್ರಿಕಾ ಮಲೆಯಾಳ ಪತ್ರಿಕೆ ನಿರ್ದೇಶಕ, ಎಸ್ ವೈ ಎಸ್ ರಾಜ್ಯ ಕೋಶಾಧಿಕಾರಿ, ಕಾಂಞಂಗಾಡು ಜಂಟಿ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ, ಹಿರಿಯ ವ್ಯಾಪಾರಿ ಮತ್ತು ಮುಸ್ಲಿಂ ಲೀಗ್ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾಂಞಂಗಾಡು ಉತ್ತರ ಚಿತ್ತಾರಿ ನಿವಾಸಿ ಮೆಟ್ರೋ ಮುಹಮ್ಮದ್ ಹಾಜಿ (68) ಅವರು ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ನಿಧನ ಹೊಂದಿದರು.
ಮೆಟ್ರೊ ಮುಹಮ್ಮದ್ ಹಾಜಿ ಜಿಲ್ಲೆಯ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಚಿತ್ತಾರಿ ಅಜೀಜಿಯಾ ಅರೇಬಿಕ್ ಕಾಲೇಜಿನ ಅಧ್ಯಕ್ಷ, ಇಂಗ್ಲಿಷ್ ಮಾಧ್ಯಮ ಶಾಲೆ, ಪೆರಿಯಾ ಅಂಬೇಡ್ಕರ್ ಶಿಕ್ಷಣ ಚಾರಿಟೇಬಲ್ ಟ್ರಸ್ಟ್, ಕೆಎಂಸಿಸಿ ಯುಎಇ ಸಮಿತಿಯ ಸಲಹಾ ಸಮಿತಿ ಸದಸ್ಯ, ಅಲ್ಪಸಂಖ್ಯಾತ ಶಿಕ್ಷಣ ಸಮಿತಿ ರಾಜ್ಯ ಕೋಶಾ„ಕಾರಿ, ಚಟ್ಟಂಚಲ್ ಮಹಾನಾಬಾದ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಮೆನೇಜ್‍ಮೆಂಟ್ ಸಮಿತಿ ಸದಸ್ಯ, ಜಿಲ್ಲಾ ಕ್ರೀಡಾ ಮಂಡಳಿಯ ಉಪಾಧ್ಯಕ್ಷ, ಚಿತ್ತಾರಿ ಕ್ರೆಸೆಂಟ್ ಶಾಲಾ ನಿರ್ವಹಣೆ ಮತ್ತು ರೈಫಲ್ ಸಂಘದ ಮಾಜಿ ಜಿಲ್ಲಾ ಕೋಶಾ„ಕಾರಿ ಅತ್ಯುತ್ತಮ ಸಂಘಟಕರಾಗಿದ್ದ ಅವರು ಕಾಸರಗೋಡು ಜಿಲ್ಲಾ ಸಮಿತಿ ಶಂಶುಲ್ ಉಲಮಾ ಪ್ರಶಸ್ತಿ, ಪನಕ್ಕಾಡ್ ಸೈಯದ್ ಮೊಹಮ್ಮದಾಲಿ ಶಿಹಾಬ್ ಸ್ಮಾರಕ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಪ್ರವಾಸಿ ಕರ್ಮ ಪ್ರಶಸ್ತಿ, ಗಾಂ„ ದರ್ಶನ ಪ್ರಶಸ್ತಿ, ಇ.ಅಹ್ಮದ್ ಪ್ರಶಸ್ತಿ, ಅಲ್ಪಸಂಖ್ಯಾತ ವಿದ್ಯಾಲಯ ಸಮಿತಿ ಅತ್ಯುತ್ತಮ ಶೈಕ್ಷಣಿಕ ಕಾರ್ಯಕರ್ತ, ಕೊಯಮತ್ತೂರಿನ ಕಾರುಣ್ಯ ರಕ್ತದಾನಿಗಳ ಸಂಘದ ಕಾರುಣ್ಯ ದರ್ಶನ ಪ್ರಶಸ್ತಿ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


