ಮದೂರು: ಮಧೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ದಿ.ಯು.ಕೆ.ಗಟ್ಟಿ ಹಾಗು ಭಾರತೀಯ ಜನಸಂಘ ಸ್ಥಾಪಕ ನೇತಾರ ದಿ.ಶ್ಯಾಮ ಪ್ರಸಾದ ಮುಖರ್ಜಿ ಅವರ ಸಂಸ್ಮರಣೆ ಸಭೆ ರಾಮದಾಸನಗರ ಪಕ್ಷದ ಕಾರ್ಯಾಲಯದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ರಾಧಾಕೃಷ್ಣ ಸೂರ್ಲು ವಹಿಸಿದ್ದರು. ಹಿರಿಯ ನೇತಾರರಾದ ವಿಠಲ ಶೆಟ್ಟಿ ಮತ್ತು ಮಾಧವ ಮಾಸ್ತರ್ ಸಂಸ್ಮರಣೆ ಭಾಷಣಗೈದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಸತೀಶ್ ಎನ್, ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಎಸ್.ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪಕ್ಷದ ಪಂಚಾಯತ್ ಕಾರ್ಯದರ್ಶಿ ಉಮೇಶ್ ಗಟ್ಟಿ ಸ್ವಾಗತಿಸಿದರು. ರವೀಂದ್ರ ರೈ ವಂದಿಸಿದರು.


