ತಿರುವನಂತಪುರ: ದೇಶಾದ್ಯಂತ ಭಾರೀ ಪ್ರತಿಭಟನೆ, ಕುತೂಹಲ ಮತ್ತು ತೀವ್ರ ಕಳವಳಕಾರಿಯಾಗುವಂತೆ ಭಾನುವಾರ ಕೇರಳ ರಾಜ್ಯ ಸರ್ಕಾರ ಹೊರಡಿಸಿರುವ 118-ಎ ಪೋಲೀಸ್ ಕಾಯ್ದೆಯ ಬಗ್ಗೆ ಎಲ್ಲೆಡೆಯಿಂದ ಪ್ರತಿಭಟನೆಗಳು ವ್ಯಕ್ತವಾಗಿದೆ. ದಿನ ಬೆಳಗಾದರೆ ಮಾನವಹಕ್ಕು, ಸ್ವಾತಂತ್ರ್ಯ ಎಂದೆಲ್ಲ ಧ್ವನಿಯೆತ್ತುವ ಎಡಪಕ್ಷ ಸ್ವತಃ ಆಡಳಿತದಲ್ಲಿರುವ ಕೇರಳದಲ್ಲೇ ಇಂತಹದೊಂದು ಕಾನೂನು ಜಾರಿಗೆ ಬರುತ್ತಿರುವುದು ಹಲವು ಸಂಶಯ, ಸ್ವಾರ್ಥಪರತೆಯನ್ನು ಹುಟ್ಟುಹಾಕಿದೆ.
ವಿಜಯ ಪಿ ನಾಯರ್- ಭಾಗ್ಯಲಕ್ಷ್ಮಿ ವಿರುದ್ಧ ಅಶ್ಲೀಲ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೆÇೀಸ್ಟ್ ಮಾಡಿದ ಬಳಿಕದ ಬೆಳವಣಿಗೆಗಳಲ್ಲಿ ಪೆÇಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಪಿಣರಾಯಿ ವಿಜಯನ್ ಸರ್ಕಾರ ಮನವೊಲಿಸಲಾಗಿದೆ ಎನ್ನಲಾಗಿದೆ. ಇದನ್ನು ಅನುಸರಿಸಿ, ಸಾಮಾಜಿಕ ಮಾಧ್ಯಮ ಮತ್ತು ಇತರ ಸಂವಹನ ಸಾಧನಗಳಲ್ಲಿ ಬೆದರಿಕೆಗಳು, ನಿಂದನೆ ಮತ್ತು ಮಾನಹಾನಿಕರ ವಿಷಯಗಳ ವಿರುದ್ಧ ಸರ್ಕಾರವು ಜಾರಿಗೊಳಿಸಿದ 118-ಎ, ಕಾಯ್ದೆ ಕುಡುಗೋಲಾಗಲಿದ್ದು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಹಾಗಿದ್ದರೆ.......118-ಎ ಎಂದರೇನು?
ಬೆದರಿಕೆ, ಅವಮಾನ ಅಥವಾ ಮಾನಹಾನಿ ಮಾಡುವ ಯಾವುದನ್ನಾದರೂ ತಯಾರಿಸುವುದು, ವ್ಯಕ್ತಪಡಿಸುವುದು, ಪ್ರಕಟಿಸುವುದು ಮತ್ತು ಹರಡುವುದನ್ನು ಈ ಕಾಯ್ದೆಯಡಿ ಶಿಕ್ಷಾರ್ಹಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ಬೆದರಿಸುವುದು, ಅವಮಾನಿಸುವುದು ಅಥವಾ ಮಾನಹಾನಿ ಮಾಡುವುದು, ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೂ ಅಭಿಪ್ರಾಯ ವ್ಯಕ್ತಪಡಿಸುವುದು ಅಥವಾ ನಿಂದಿಸುವುದು, ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು, ಗುಂಪಿಗೆ ನೋವಾಗಿದ್ದರೆ ಸಾಕು....ಅಣ್ಣೆ ಉಳಾಯಿ!ಅದೂ ಜಾಮೀನು ರಹಿತ!! ಶಿಕ್ಷೆಯೊಂದಿಗೆ ದಂಡವೂ ವಿಧಿಸಲ್ಪಡುವುದು.
ಪ್ರತಿಭಟನೆ ಏಕೆ?:
ತರಾತುರಿಯಲ್ಲಿ ಇಂತಹದೊಂದು ಕಾನೂನು ಯಾಕಾಗಿ, ಯಾರಿಗಾಗಿ ಜಾರಿಗೆ ತರಲಾಗುತ್ತಿದೆ ಎಂಬುದು ಉದ್ಭವಿಸುವ ಮುಖ್ಯ ಪ್ರಶ್ನೆ. ಮಾತನಾಡುವ, ಪ್ರಶ್ನಿಸುವ ಮತ್ತು ತಿಳಿದುಕೊಳ್ಳುವ ಹಕ್ಕಿನ ಹೋರಾಟ ಭಾರತದಲ್ಲಿ ಅತ್ಯಂತ ತೀವ್ರವಾದುದು. ಈ ಹೋರಾಟಗಳನ್ನು ಹತ್ತಿಕ್ಕಲು ಕೇರಳ ಸರ್ಕಾರದ ಹೊಸ ಕಾನೂನು ತಿದ್ದುಪಡಿಯನ್ನು ಬಳಸಬಹುದೆಂಬ ಆತಂಕವಿದೆ. ಅದರಲ್ಲೂ ಕೇರಳವೆಂದರೆ ದಿನನಿತ್ಯ ಪ್ರತಿಭಟನೆ, ಹೋರಾಟಗಳ ತವರು ನೆಲವೆಂದೇ ಖ್ಯಾತವಾದುದು. ಈ ಕಾನೂನು ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೊಟಕುಗೊಳಿಸಬಹುದು. ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲವು ಸಮಯಗಳ ಹಿಂದೆ ಹೊರಡಿಸಿದ್ದ ಅಧಿಸೂಚನೆಯಂತೆಯೇ ಇದೆಂದು ಟೀಕೆಗಳು ವ್ಯಕ್ತವಾಗಿದೆ.
ಪೋಲೀಸರು ಮನಬಂದಾಗ ದೂರು ಈ ಕಾರಣ ದಾಖಲಿಸಬಹುದೇ?:
ಹೊಸ ಕಾನೂನಿನ ಪ್ರಕಾರ, ವಾರಂಟ್ ಇಲ್ಲದೆ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗುವುದು. ಸೆಕ್ಷನ್ 125 ನ್ನು ಈ ಉದ್ದೇಶಕ್ಕಾಗಿ ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್ 118-ಎ ನ್ನು ಇದಕ್ಕೆ ಸೇರಿಸಲಾಗಿದೆ. ಬೆದರಿಕೆಗಳು, ಅವಮಾನಗಳು, ಮತ್ತು ಮಾನಹಾನಿ ಇವೆಲ್ಲವೂ ಸಂಭವನೀಯ ವ್ಯಾಖ್ಯಾನಗಳಾಗಿವೆ. ಈ ಕಾನೂನು ಪೆÇಲೀಸರಿಗೆ ಅದನ್ನು ಅರ್ಥೈಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ಅದಕ್ಕಾಗಿಯೇ ಪೆÇಲೀಸರು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಬಹುದು. ಅಂದರೆ, ಇಂತಹ ವಿಷಯವನ್ನು ಇಷ್ಟಪಡುವ ಅಥವಾ ಪ್ರತಿಕ್ರಿಯಿಸುವ ಮೂಲಕ ರಿಟ್ವೀಟ್ ಮಾಡಬಹುದು. ಮತ್ತು ಒಂದೇ ವಿಷಯದ ಮೇಲೆ ಒಂದಕ್ಕಿಂತ ಹೆಚ್ಚು ಪೆÇಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ಸಾಧ್ಯವೇ? ಎಲ್ಲೆಡೆ ಆರೋಪಿಗಳನ್ನು ಬಂಧಿಸಲಾಗುತ್ತದೆಯೇ? ಅಂತಹ ವಿಷಯಗಳಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.
ಸಿಎಂ ಏನು ಹೇಳುತ್ತಾರೆ?:
ತಮ್ಮ ಸ್ವಾತಂತ್ರ್ಯವು ಇತರರ ಜೀವಹಾನಿಗೆ, ಮಾನಹಾನಿಗೆ ಕಾರಣ ಎಂದು ಭಾವಿಸದೆ ಸ್ವಾಚ್ಚಾಚಾರಿಗಳಿಗಷ್ಟೇ ಇದು ಬಾಧಕವಾಗುವುದು. ಸಾಮಾಜಿಕ ಮಾಧ್ಯಮ ಚಾನೆಲ್‍ಗಳ ಬಳಕೆಯಿಂದ ಕುಟುಂಬ ಸಂಬಂಧಗಳು ಚೂರುಚೂರಾಗುತ್ತಿವೆ. ಪತ್ರಿಕೋದ್ಯಮದ ಸೋಗಿನಲ್ಲಿ ಕೆಲವರು ನಡೆಸಿದ ಇಂತಹ ಅಮಾನವೀಯ ಮತ್ತು ಘೋರ ಸೈಬರ್ ದಾಳಿಯ ಉದಾಹರಣೆಗಳು ಸರ್ಕಾರದ ಗಮನಕ್ಕೆ ಬಂದಿದೆ. ಸುಸಂಸ್ಕøತ ಸಮಾಜದಲ್ಲಿ ವ್ಯಕ್ತಿಯ ಘನತೆ ಮತ್ತು ಸಮಧಾನದ ಜೀವನ ಮುಖ್ಯವಾಗಿದೆ. ಅದು ಸಾಂವಿಧಾನಿಕ ರಕ್ಷಣೆಯನ್ನು ಹೊಂದಿದೆ. ಅದನ್ನು ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಮಾಧ್ಯಮ ಸ್ವಾತಂತ್ರ್ಯದ ಜೊತೆಗೆ, ಸಂವಿಧಾನವು ಖಾತರಿಪಡಿಸಿದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ವಾದಗಳನ್ನು ಮಾಡುತ್ತಿದ್ದಾರೆ.
ಪಾಲಿಟ್ ಬ್ಯೂರೋ ಕಿಡಿ:
ನೂತನ ಪೋಲೀಸ್ ಕಾಯ್ದೆಯ ಹಿನ್ನೆಲೆಯಲ್ಲಿ ಎಲ್ಲೆಡೆ ವ್ಯಕ್ತವಾಗುತ್ತಿರುವ ತೀವ್ರ ಪ್ರತಿಭಟನೆಯ ಬಳಿಕ ಕೇರಳ ಸರ್ಕಾರದ ಬಗ್ಗೆ ಧ್ವನಿಯೆತ್ತಿರುವ ಸಿಪಿಎಂ ಕೇಂದ್ರ ಸಮಿತಿ ಕೇರಳದ್ದು ಅಪ್ರಬುದ್ದ ನಡೆ ಎಂದು ಕಿವಿಹಿಂಡಿದೆ. ಈ ಬಗ್ಗೆ ಕೇರಳದ ಪಕ್ಷದ ಪ್ರಮುಖರಿಗೆ, ಮುಖ್ಯಮಂತ್ರಿಗೆ ಸೂಚನೆ ನೀಡಲಾಗಿದ್ದು ತಿದ್ದುಪಡಿಗೆ ಸೂಚಿಸಲಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.





