ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸೋಮವಾರ 248 ಮಂದಿಯಿಂದ ನಾಮಪತ್ರಿಕೆ ಸಲ್ಲಿಕೆ ನಡೆಸಿದ್ದಾರೆ.
ಜಿಲ್ಲಾ ಪಂಚಾಯತ್ ವಿಭಾಗಗಳಿಗೆ ಯಾರೂ ನಾಮಪತ್ರಿಕೆ ಸಲ್ಲಿಸಿಲ್ಲ. ಬ್ಲೋಕ್ ಪಂಚಾಯತ್ ಮಟ್ಟದಲ್ಲಿ ಪರಪ್ಪದಲ್ಲಿ ಮಾತ್ರ ಇಬ್ಬರು ನಾಮಪತ್ರಿಕೆ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ 207 ಮಂದಿ ನಾಮಪತ್ರಿಕೆ ಸಲ್ಲಿಸಿದ್ದಾರೆ.
ನಾಮಪತ್ರಿಕೆ ಸಲ್ಲಿಸಿದವರು: ಸಂಸ್ಥೆ-ಸಂಖ್ಯೆ ಕ್ರಮದಲ್ಲಿ
ಜಿಲ್ಲಾ ಪಂಚಾಯತ್ : 0
ಬ್ಲೋಕ್ ಪಂಚಾಯತ್ : ನೀಲೇಶ್ವರ -0, ಕಾಸರಗೋಡು-0, ಕಾಞಂಗಾಡ್-0. ಮಂಜೇಶ್ವರ-0, ಪರಪ್ಪ-2, ಕಾರಡ್ಕ-0.
ನಗರಸಭೆ : ಕಾಞಂಗಾಡ್ ನಗರಸಭೆ-1, ಕಾಸರಗೋಡು-11, ನೀಲೇಶ್ವರ 27.
ಗ್ರಾಮಪಂಚಾಯತ್ : ಚೆರುವತ್ತೂರು-44, ತ್ರಿಕರಿಪುರ-4, ಪಿಲಿಕೋಡ್-32, ಅಜಾನೂರು-3, ಉದುಮಾ-2, ಪುಲ್ಲೂರು-ಪೆರಿಯ-13, ಅಜಾನೂರು-3, ದೇಲಂಪಾಡಿ-1, ಮುಳಿಯಾರು-5, ಕುಂಬ್ಡಾಜೆ-1, ಕಾರಡ್ಕ-1, ಬೇಡಡ್ಕ-8, ಬಳಾಲ್-10, ವೆಸ್ಟ್ ಏಳೇರಿ-4, ಕಳ್ಳಾರ್-12, ಕೋಡೋಂ-ಬೇಳೂರು-14, ಚೆಮ್ನಾಡ್-5, ಮಧೂರು-10, ಚೆಂಗಳ-18, ಬದಿಯಡ್ಕ-1, ವರ್ಕಾಡಿ-2, ಮಂಗಲ್ಪಾಡಿ-11, ಪೈವಳಿಕೆ-2, ಎಣ್ಮಕಜೆ-1.





