ತಿರುವನಂತಪುರ: ಕೇರಳದಲ್ಲಿ ಇಂದು 3966 ಜನರಿಗೆ ಕೋವಿಡ್ ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಗುಣಮುಖರಾದವರ ವಿವರ:
ಚಿಕಿತ್ಸೆ ಪಡೆಯುತ್ತಿರುವ 4,544 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 334, ಕೊಲ್ಲಂ 378, ಪತ್ತನಂತಿಟ್ಟು 127, ಆಲಪ್ಪುಳ 251, ಕೊಟ್ಟಾಯಂ 202, ಇಡುಕ್ಕಿ 174, ಎರ್ನಾಕುಳಂ 476, ತ್ರಿಶೂರ್ 826, ಪಾಲಕ್ಕಾಡ್ 228, ಮಲಪ್ಪುರಂ 779, ಕೋಝಿಕ್ಕೋಡ್ 455, ವಯನಾಡ್ 93,ಕಣ್ಣೂರು 136, ಕಾಸರಗೋಡು 85 ಎಂಬಂತೆ ಗುಣಮುಖರಾಗಿರುವರು.
ಕೋವಿಡ್ ಧನಾತ್ಮಕ ಪ್ರಕರಣಗಳ ವಿವರ:
ಕೇರಳದಲ್ಲಿ ಇಂದು, ಕೋವಿಡ್ 3966 ಪ್ರಕರಣಗಳನ್ನು ದೃಢಪಡಿಸಿದರೆ, ಹೆಚ್ಚಿನ ಪ್ರಕರಣಗಳು ಮಲಪ್ಪುರಂ ಜಿಲ್ಲೆಯಲ್ಲಿ ದಾಖಲಾಗಿದೆ. ಮಲಪ್ಪುರಂ 612, ತ್ರಿಶೂರ್ 525, ಎರ್ನಾಕುಳಂ 397, ಕೋಝಿಕ್ಕೋಡ್ 374, ಪಾಲಕ್ಕಾಡ್ 351, ಕೊಟ್ಟಾಯಂ 346, ತಿರುವನಂತಪುರ 262, ಆಲಪ್ಪುಳ 236, ಕೊಲ್ಲಂ 229, ಪತ್ತನಂತಿಟ್ಟು 159, ಇಡುಕ್ಕಿ 143, ಕಣ್ಣೂರು 131, ವಯನಾಡ್ 105, ಕಾಸರಗೋಡು 96 ಎಂಬಂತೆ ಸೋಂಕು ದೃಢಪಟ್ಟಿದೆ.
ಇಂದು, ಕೋವಿಡ್ ನಿಂದ 23 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ನರ್ವಮೂಡುನ ವಲ್ಸಲಾ (64), ಪಳ್ಳಿಕ್ಕಲ್‍ನ ರಾಧಾಕೃಷ್ಣನ್ (70), ಪತ್ತನಂತಿಟ್ಟಿನ ಕುಂಞÂ ಮೋಲ್ (64), ಕೊನ್ನಿಯ ಕೆ.ಆರ್. ಬಾಲನ್ (66), ಆಲಪ್ಪುಳ ಚೇರ್ತಲದ ಥಾಮಸ್ (87), ತಲವಾಡಿಯ ಪ್ರಸನ್ನ (63), ಚೆಂಗನ್ನೂರಿನ ಅನ್ನಮ್ಮ ರಾಜು (71), ಕೋಟ್ಟಯಂ ಒಮಲೂರಿನ ಔಸೆಫ್(68), ಮಲ್ಲಶೇರಿಯ ಪಿಸಿ ಫಿಲಿಫ್(72), ಕೋಟ್ಟಾಯಂನ ಜಾನ್ (80),ಕೋಟ್ಟಯಂನ ಲೀಲಾ ಚಂದ್ರಶೇಖರ್ (42), ಎರ್ನಾಕುಳಂ ಚೆಲ್ಲಾನಂನ ಗ್ರೇಸಿ ಜಾನ್ (65), ಅಲುವಾದ ಜೋಸೆಫ್ ಬಾಬು (68), ತೃಶೂರ್ ಪುನ್ನಯೂರಿನ ಅಚುಮ್ಮ (67), ಮಡಕತ್ತರದ ದೇವಕಿ ಅಮ್ಮ (85), ಕೈಪಮಂಗಳದ ಇಬ್ರಾಹಿಂ (85), ಕೊಡುಂಗಲ್ಲೂರ್ ನ ಕೆ.ಎ.ಜೋಸೆಫ್(65), ಗುರುವಾಯೂರ್ ಮೂಲದ ಐ.ಎಸ್.ವಾಸು(80), ಮಲಪ್ಪುರಂ ಕೊಕ್ಕೂರಂನ ಕಾತ್ರ್ಯಾಯಿನಿ (69), ಕೊಂಡೊಟ್ಟಿಯ ಉಮ್ಮಚುಟ್ಟಿ (80), ಮಲಪ್ಪುರಂನ ಅಲಿ (74), ಭೂತಾನಮ್ ನ ನಾರಾಯಣನ್ (71), ಕೋಝಿಕ್ಕೋಡ್ ಕರಿಕ್ಕುಳಂನ ಎಂ.ವಿ.ಹಸನ್(87) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ.
ಸೋಂಕಿನ ಇಳಿಯಿ ಕಡಿಮೆ-ಆತಂಕ:
ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಆತಂಕದ ವಿಷಯ. ಬದುಕುಳಿದವರ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ, ಸಾವಿನ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲವಾದದ್ದು ಹಿನ್ನಡೆಯಾಗಿದೆ. ಕೋವಿಡ್ ಪ್ರಕರಣಗಳು ಸಂಪರ್ಕದ ಮೂಲಕ ಹೆಚ್ಚುತ್ತಿದೆ. ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕು ವ್ಯಾಪಕಗೊಳ್ಳುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚದಿದ್ದರೂ ಮನೆ ಮತ್ತು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮತ್ತು ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಹೆಚ್ಚಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು:
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಸಾವಿನ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 93,09,788 ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ 4,55,555 ಸಕ್ರಿಯ ರೋಗಿಗಳಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ, 87,18,517 ಜನರನ್ನು ಗುಣಪಡಿಸಲಾಗಿದೆ. ನಿನ್ನೆ 39,379 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. 1,35,715 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇತರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ:
ಕೇರಳ, ಪಶ್ಚಿಮ ಬಂಗಾಳ ಮತ್ತು ದೆಹಲಿ ರಾಜ್ಯಗಳು ದಿನಕ್ಕೆ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿವೆ. ಕಳೆದ ಕೆಲವು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಹೆಚ್ಚಳ ಕಂಡುಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳನ್ನು ಎದುರಿಸುತ್ತಿದ್ದ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಇದೀಗ ಗಣನೀಯ ಕುಸಿತ ಇದೆ. . ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ.


