ತಿರುವನಂತಪುರ: ಪೋಲೀಸ್ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯಲು ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಇಂದು ಸಹಿ ಹಾಕಿರುವರು.
ನಿನ್ನೆ, ಕ್ಯಾಬಿನೆಟ್ ತುರ್ತು ಸಭೆ ಕರೆದು ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಸುಗ್ರೀವಾಜ್ಞೆಯನ್ನು ಕಳುಹಿಸಲಾಗಿತ್ತು. ಪಕ್ಷ ಮತ್ತು ಪ್ರತಿಪಕ್ಷ ಸಹಿತ ಎಲ್ಲೆಡೆಗಳಿಂದ ಕೇಳಿಬಂದ ಕಟು ಟೀಕೆಗಳ ಕಾರಣ ಮುಖ ಉಳಿಸಲು ಬೇರೆ ದಾರಿಗಳಿಲ್ಲದೆ ಸರ್ಕಾರವು ಕಾನೂನನ್ನು ಹಿಂಪಡೆದಿದೆ.


