ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೊದಲು ಕೋವಿಡ್ ರಕ್ಷಣಾ ಅಭಿಯಾನ ವಿಫಲವಾದ ಬಗ್ಗೆ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಕಳವಳ ವ್ಯಕ್ತಪಡಿಸಿದ್ದಾರೆ. ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ ಕೇರಳದಲ್ಲಿ ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಆದರೆ ಚುನಾವಣೆಯ ನಂತರ ಚಿತ್ರ ಬದಲಾಗಲಿದೆ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ ಎಂದು ಕೆ.ಕೆ. ಶೈಲಾಜಾ ಹೇಳಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮನೆಗಳಿಗೆ ಭೇಟಿ ನೀಡುವುದನ್ನು ಮತ್ತು ಮತಗಳನ್ನು ಕೋರುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಮಾಸ್ಕ್ ಕಳಚಿ ಜನರು ಮತ ಕೇಳುವ ದೃಶ್ಯ ಆಘಾತಕಾರಿ. ಚುನಾವಣಾ ಪ್ರಚಾರದಲ್ಲಿ ಹಲವರು ಜೊತೆಯಾಗುತ್ತಿದ್ದಾರೆ. ಆದರೆ ಕೋವಿಡ್ ಇನ್ನಷ್ಟು ವ್ಯಾಪಕಗೊಮಡರೆ ನಮ್ಮ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಸಾಕಾಗಲಾರದು. ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲದಿದ್ದರೆ ಹೆಚ್ಚಿನ ಜನರು ಸಾಯಬೇಕಾದ ಸ್ಥಿತಿ ನಿರ್ಮಾಣವಾಗಬಹುದು ಎಂದು ಆರೋಗ್ಯ ಸಚಿವೆ ಎಚ್ಚರಿಸಿದರು.
ಮತದಾರರು ಕೋವಿಡ್ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳು ಎಲ್ಲಾ ಉತ್ಸಾಹ ಮತ್ತು ಸಂತೋಷವನ್ನು ನಿಯಂತ್ರಿಸುವಲ್ಲಿ ಸಂಯಮವನ್ನು ನಿರ್ವಹಿಸಬೇಕಾಗಿದೆ. ಸಭೆ ನಡೆಸಲು ಯಾವುದೇ ನಿಯಂತ್ರಣಗಳಿಲ್ಲ, ಆದರೆ ಕೋವಿಡ್ ನಿಬಂಧನೆಗಳನ್ನು ಅನುಸರಿಸಬೇಕು. ಪ್ರತಿಯೊಬ್ಬರೂ ಹೆಚ್ಚು ಜಾಗರೂಕರಾಗಿದ್ದರೆ ಚುನಾವಣೆಯ ಬಳಿಕ ಅನೇಕ ಜನರು ಕೋವಿಡ್‍ನಿಂದ ಸಾವನ್ನಪ್ಪುವ ಸಾಧ್ಯತೆಯನ್ನು ನಿಯಂತ್ರಿಸಬಹುದು. ಹಿರಿಯರು ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು. ಜೀವನಶೈಲಿ ಕಾಯಿಲೆ ಇರುವ ಜನರು ಸಭೆಗಳಲ್ಲಿ ಭಾಗವಹಿಸಬಾರದು ಎಂದು ಆರೋಗ್ಯ ಸಚಿವೆ ಎಚ್ಚರಿಸಿರುವರು.
ಕೋವಿಡ್‍ನಿಂದ ಎಷ್ಟು ಜನರು ಸಾವನ್ನಪ್ಪುತ್ತಾರೆ ಎಂಬುದು ಉಳಿದಿರುವ ಪ್ರಶ್ನೆಯಾಗಿದೆ. ಕೋವಿಡ್ ಬಳಿಕದ ಜಗತ್ತಿನಲ್ಲಿ ಎಷ್ಟು ಜನರು ಸತ್ತರು ಮತ್ತು ಕೇರಳದಲ್ಲಿ ಅದರ ಪ್ರಭಾವದ ಬಗ್ಗೆ ತೀವ್ರ ಕಳವಳ ಇದೆ.ಈವರೆಗೆ ಸಾಧ್ಯವಾದಷ್ಟು ಜನರನ್ನು ಸಾವಿನಿಂದ ರಕ್ಷಿಸಲಾಗಿದೆ. ಆದರೆ ಇದೀಗ ಚುನಾವಣೆ ಅಬ್ಬರಿಸುವುದರೊಂದಿಗೆ ಹೆಚ್ಚಿನ ಜಾಗ್ರತೆ ಬೇಕಿದೆ ಎಂದು ಕೆ.ಕೆ.ಶೈಲಜಾ ಹೇಳಿರುವರು.


