ಕೋಝಿಕ್ಕೋಡ್: ಇಲ್ಲಿಯ ಆವಾಲಪಾಂಡಿ ಎಂಬಲ್ಲಿ ಹೊಳೆಗಳು ಮತ್ತು ಹೊಲಗಳಲ್ಲಿನ ಪಾಚಿ ಹೂವುಗಳನ್ನು ನೋಡಲು ರಾಜ್ಯದ ವಿವಿಧ ಭಾಗಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ವೈಲೆಟ್-ಹೊದಿಕೆಯ ಚಾದರದಂತೆ ಕಣ್ಣಿಗೆ ಸೊಬಗುಂಟುಮಾಡುವ ಈ ಪಾಚಿ ಇಲಿಯ ನದಿ, ಬಯಲು ಪ್ರದೇಶಗಳಲ್ಲಿ ಹರಡಿ ನಿಂತಿದ್ದು ಹೊಸ ಪ್ರಪಂಚದ ಭಾವ ಮೂಡಿಸುತ್ತದೆ. ಇದರಿಂದಲೇ ಅನೇಕ ಸಂದರ್ಶಕರು ಇದನ್ನು ವೀಕ್ಷಿಸಲು ಆಗಮಿಸುತ್ತಾರೆ. ಆದರೆ ಅದು ನೋಡಲು ಮನೋಹರವಾಗಿದ್ದರೂ ಅತ್ಯಂತ ಅಪಾಯಕಾರಿಯೂ ಹೌದೆಂಬುದು ಒಂದಷ್ಟು ವಿಚಲಿತಗೊಳಿಸುವ ಭೀತಿಕರವಾದುದೂ ಹೌದು!
ದಕ್ಷಿಣ ಅಮೆರಿಕಾ ಮೂಲದ ಕಬೊಂಬಾ ಫರ್ಕಾಟ್ ಎಂಬ ಜಲಸಸ್ಯವು ಆವಾಲಪಾಂಡಿಯಾದ್ಯಂತ ಅರಳುತ್ತದೆ. ಈ ಪಾಚಿಗಳ ಸ್ವರೂಪವೆಂದರೆ ಅದು ಇತರ ಜಲಸಸ್ಯಗಳನ್ನು ತನ್ನ ವಿಸ್ತರಣಾ ಸ್ವರೂಪದ ಬೃಹತ್ತತೆಯ ಮೂಲಕ ವೇಗವಾಗಿ ನಾಶಗೊಳಿಸುತ್ತದೆ!ಮತ್ತು ಭೂಮಿಯನ್ನು ಸಂಪೂರ್ಣ ಆಪೋಶನಗೈಯ್ಯುತ್ತದೆ. ಮುಲ್ಲನ್ ಪಾಚಿ ಎಂದೂ ಕರೆಯಲ್ಪಡುವ ಕಬೊಂಬಾ ಹೂವಿನೊಂದಿಗೆ ಆವಾಲಪಾಂಡಿಗೆ ಆಗಮಿಸುವ ಜನರು ಪಾಚಿ ಕಾಂಡಗಳನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುವುದೂ ಕಂಡುಬರುತ್ತದೆ.
ಪಾಚಿಗಳನ್ನು ಕತ್ತರಿಸುವುದರಿಂದ ಅದರ ಬೆಳವಣಿಗೆಯ ವೇಗ ಸೂಪರ್ ಫಾಸ್ಟ್ ಸ್ವರೂಪದಲ್ಲಿ ವಿಸ್ತರಿಸಲ್ಪಡುತ್ತಿರುವುದು ವಿಶೇಷತೆಯಾಗಿದೆ. ಪಾಚಿಗಳು ಈ ಪ್ರದೇಶದ ಇತರ ಭಾಗಗಳಿಗೆ ಹರಡಬಹುದು ಮತ್ತು ಇತರ ಸಸ್ಯಗಳನ್ನು ನಾಮಾವಶೇಷಗೊಳಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.


