ಕೊಚ್ಚಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾರ್ಮಿಕ ಸಂಘಗಳು ಕರೆದ 24 ಗಂಟೆಗಳ ರಾಷ್ಟ್ರೀಯ ಮುಷ್ಕರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದೆ. ಮುಷ್ಕರದಲ್ಲಿ ಬಿಎಂಎಸ್ ಹೊರತುಪಡಿಸಿ ಹತ್ತು ಕಾರ್ಮಿಕ ಒಕ್ಕೂಟಗಳು ಭಾಗವಹಿಸುತ್ತಿವೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಷ್ಕರವು ಹರತಾಳವಾಗಿ ಮಾರ್ಪಟ್ಟಿದೆ.
ಮುಷ್ಕರ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪರೀಕ್ಷೆಗೆ ಕುಳಿತುಕೊಳ್ಳಬೇಕಾದ ಆತಂಕ ವಿದ್ಯಾರ್ಥಿಗಳಿಗಿತ್ತು. ಮುಷ್ಕರ ಕೇರಳದಲ್ಲಿ ಹರತಾಳ ಆಗಿ ಬದಲಾಗುತ್ತಿರುವುದರಿಂದ ವಾಹನ ಸೌಲಭ್ಯವಿಲ್ಲ ಮೊಟಕುಗೊಂಡಿದೆ. ಇದು ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿರಿಸಿರುವುದರಿಂದ ಗಣಿತ ವಿಜ್ಞಾನ ಮತ್ತು ರಾಸಾಯನಿಕ ವಿಜ್ಞಾನ ಪರೀಕ್ಷೆಗಳು ನಾಳೆ ನಡೆಯಲಿದೆ. ಏತನ್ಮಧ್ಯೆ, ನಿವಾರ್ ಚಂಡಮಾರುತದಿಂದಾಗಿ ತಮಿಳುನಾಡಿನ ಯುಜಿಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೇರಳದಲ್ಲಿ, ಮುಷ್ಕರದಿಂದಾಗಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಅಡ್ಡಿಯಾಗಬಹುದೆಂಬ ಭಯದಲ್ಲಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಸೇರಿದಂತೆ 25 ಕೋಟಿಗೂ ಹೆಚ್ಚು ಕಾರ್ಮಿಕರು ಮತ್ತು ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಬ್ಯಾಂಕಿಂಗ್, ಟೆಲಿಕಾಂ, ವಿಮೆ, ರೈಲ್ವೆ ಮತ್ತು ಗಣಿಗಾರರೂ ಮುಷ್ಕರಕ್ಕೆ ಸೇರಿಕೊಂಡಿದ್ದಾರೆ. ರೈಲ್ವೆಯ ಕೆಲಸಕ್ಕೆ ಅಡ್ಡಿಯಾಗದ ರೀತಿಯಲ್ಲಿ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ.
ಕೃಷಿ ನೀತಿಯ ವಿರುದ್ಧ ರೈತರ ಮೆರವಣಿಗೆಗಳು ಬೆಳಗ್ಗೆ ಪ್ರಾರಂಭವಾಗಿದೆ. ದೆಹಲಿ ಗಡಿಯಲ್ಲಿ ಮೆರವಣಿಗೆಯನ್ನು ನಿರ್ಬಂಧಿಸುವ ಸಾಧ್ಯತೆಯಿದೆ. ದೆಹಲಿ ಚಲೋ ಮಾರ್ಚ್ ಅನ್ನು ರೈತರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿವೆ.


