HEALTH TIPS

'ಜಗತ್ತು ನೈತಿಕ ವೈಫಲ್ಯದಿಂದ ದುರಂತದ ಅಂಚಿನಲ್ಲಿದೆ': ಕೋವಿಡ್ ಲಸಿಕಾ ವಿತರಣೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಸಮಾಧಾನ

        ಜಿನೀವಾ: ಜಾಗತಿಕ ಸಾಂಕ್ರಾಮಿಕವಾಗಿ ಮಾರ್ಪಟ್ಟಿರುವ ಕೋವಿಡ್ ಸೋಂಕಿಗೆ ಸಂಬಂಧಿಸಿದ ಲಸಿಕೆಗಳ ವಿತರಣೆಯಲ್ಲಿ ಶ್ರೀಮಂತ ರಾಷ್ಟ್ರಗಳು ಅನುಸರಿಸುತ್ತಿರುವ ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೇರವಾಗಿ ಟೀಕಿಸಿದ್ದು, ಜಗತ್ತು ನೈತಿಕ ವೈಫಲ್ಯದಿಂದ ದುರಂತದ ಅಂಚಿನಲ್ಲಿದೆ ಎಂದು ಹೇಳಿದೆ.

      ಈ ಕುರಿತಂತೆ ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ಮಂಡಳಿ ಅಧಿವೇಶನದಲ್ಲಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, 'ಶ್ರೀಮಂತ ರಾಷ್ಟ್ರಗಳಲ್ಲಿನ ಆರ್ಥಿಕ ಬಲಾಢ್ಯರು ಬಡ ರಾಷ್ಟ್ರಗಳಲ್ಲಿ ದುರ್ಬಲ ಜನರ ಮುಂದೆ ಚುಚ್ಚುಮದ್ದು ಪಡೆಯುವುದು ನ್ಯಾಯವಲ್ಲ.  49 ಶ್ರೀಮಂತ ರಾಷ್ಟ್ರಗಳು 39 ದಶಲಕ್ಷಕ್ಕೂ ಹೆಚ್ಚಿನ ಡೋಸ್  ಲಸಿಕೆಗಳನ್ನು ಹೊಂದಿದ್ದು, ಬಡ ರಾಷ್ಟ್ರವೊಂದಕ್ಕೆ ಕೇವಲ 25 ಡೋಸ್ ಲಸಿಕೆಯನ್ನು ಮಾತ್ರ ನೀಡಲಾಗಿದೆ. ಜಗತ್ತು ದುರಂತದ ನೈತಿಕ ವೈಫಲ್ಯದ ಅಂಚಿನಲ್ಲಿದೆ. ಈ ವೈಫಲ್ಯದ ಬೆಲೆಯನ್ನು ಬಡ ರಾಷ್ಟ್ರಗಳು ತೆರುವಂತಾಗುತ್ತಿದೆ.  'ನಾನು ಮತ್ತು ಮೊದಲು' (Me-First) ಈ ವಿಧಾನವು ನಮ್ಮ ಸ್ವಯಂ ಸೋಲಿಗೆ ಕಾರಣವಾಗಬಹುದು. ಇದರಿಂದ ಬೆಲೆಗಳು ಹೆಚ್ಚಾಗುತ್ತದೆ. ಅಂತಿಮವಾಗಿ ಈ ಕ್ರಮಗಳು ಮಾನವ ಮತ್ತು ಆರ್ಥಿಕ ಸಂಕಷ್ಟಗಳನ್ನು ಮಾತ್ರ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

      ಇದೇ ವೇಳೆ ಮುಂದಿನ ತಿಂಗಳು ಪ್ರಾರಂಭವಾಗಲಿರುವ ಜಾಗತಿಕ ಲಸಿಕೆ ಹಂಚಿಕೆ ಯೋಜನೆ ಕೊವಾಕ್ಸ್‌ ಉಪ ಕ್ರಮಕ್ಕೆ (Covaxin) ಸಂಪೂರ್ಣ ಬದ್ಧತೆ ನೀಡಬೇಕೆಂದು ಕರೆ ನೀಡಿದ ಅವರು, 'ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ ಬರುವ ಹೊತ್ತಿಗೆ ಪ್ರತಿ ದೇಶದಲ್ಲಿ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನಾವು 5 ಲಸಿಕೆ ಉತ್ಪಾದಕ ಸಂಸ್ಥೆಗಳಿಂದ 2 ಬಿಲಿಯನ್ ಡೋಸ್‌ಗಳನ್ನು ಪಡೆದುಕೊಂಡಿದ್ದೇವೆ. ಒಂದು ಬಿಲಿಯನ್ ಗಿಂತ ಹೆಚ್ಚಿನ ಡೋಸ್‌ಗಳ ಆಯ್ಕೆಗಳನ್ನು ಹೊಂದಿದ್ದೇವೆ. ಫೆಬ್ರವರಿಯಲ್ಲಿ ವಿತರಣೆಯನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಎಂದು ಟೆಡ್ರೊಸ್ ಹೇಳಿದರು.

     ಇಲ್ಲಿಯವರೆಗೆ ಚೀನಾ, ಭಾರತ, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ದೇಶಗಳು ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು. ಈ ಎಲ್ಲಾ ರಾಷ್ಟ್ರಗಳು ತಮ್ಮದೇ ದೇಶದ ಜನರಿಗೆ ಲಸಿಕೆ ವಿತರಣೆ ಮಾಡಲು ಆದ್ಯತೆ ನೀಡುತ್ತಿವೆ. ಅತ್ತ ವಿಶ್ವ ಆರೋಗ್ಯ ಸಂಸ್ಥೆಯ ಕೋವಾಕ್ಸ್ ಉಪಕ್ರಮಕ್ಕೆ (ಲಸಿಕೆ ವಿತರಣಾ ಕಾರ್ಯಕ್ರಮ) 180ಕ್ಕೂ ಹೆಚ್ಚು ದೇಶಗಳು ಸಹಿ ಹಾಕಿವೆ.  

      ಕೋವಿಡ್ ಲಸಿಕೆ ವಿತರಣೆಯ ಕುರಿತು ಶ್ರೀಮಂತ ರಾಷ್ಟ್ರಗಳ ನಡೆಯನ್ನು ಪ್ರಶ್ನಿಸಿದ್ದ 'ವಾಯ್ಸ್ ಆಫ್ ಅಮೇರಿಕಾ' ಸುದ್ದಿ ಸಂಸ್ಥೆ, ಪ್ರತಿ ದೇಶಕ್ಕೂ ಕೋವಿಡ್ ಲಸಿಕೆಗಳು ನ್ಯಾಯಯುತ ಹಂಚಿಕೆಯಾಗಬೇಕು. ಒಂಬತ್ತು ತಿಂಗಳ ಹಿಂದೆ ರೂಪುಗೊಂಡ 'ಕೊವ್ಯಾಕ್ಸ್' ಎಂಬ ಜಾಗತಿಕ ಉಪಕ್ರಮದ ಹೊರತಾಗಿಯೂ ಈ ಎಚ್ಚರಿಕೆ ಬಂದಿದೆ ಎಂದು ಸಂಸ್ಥೆ ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ವಿತರಣೆ ಕುರಿತು ಶ್ರೀಮಂತ ರಾಷ್ಟ್ರಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries