ಕಾಸರಗೋಡು: ಟ್ರಾನ್ಸ್ ಜೆಂಡರ್ ಗಳನ್ನು ಮತದಾತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಚಟುವಟಿಕೆ ಮಾ.6 ರ ಮುಂಚಿತವಾಗಿ ಪೂರ್ತಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾ ಟ್ರಾನ್ಸ್ ಜೆಂಡರ್ ಜಸ್ಟಿಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ.4ರಂದು ಕಾಞಂಗಾಡ್ ಜಿಲ್ಲಾ ಮೆಡಿಕಲ್ ಕಚೇರಿಯಲ್ಲಿ ಸ್ಕಾನಿಂಗ್ ನಡೆಯಲಿದೆ. ಮಾಶ.6ರ ಮುಂಚಿತವಾಗಿ ಸ್ಕಾನಿಂಗ್ ಪೂರ್ಣಗೊಳಿಸಿ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ಸಂಪೂರ್ಣಗೊಳಿಸಲಾಗುವುದು. ಸ್ಕಾನಿಂಗ್ ನಲ್ಲಿ ಭಾಗವಹಿಸದೇ ಇರುವವರಿಗಾಗಿ ಜನಜಾಗೃತಿ ತರಗತಿ ನಡೆಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ವೈದ್ಯಾಧಿಕಾರಿ, ಮನಶಾಸ್ತ್ರಜ್ಞ, ಒಬ್ಬ ಟ್ರಾನ್ಸ್ ಜೆಂಡರ್ ಇರುವ ಸಮಿತಿ ಸ್ಕಾನಿಂಗ್ ನಡೆಸುವರು.
ಗಣನೆಗಳ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಟ್ರಾನ್ಸ್ ಜೆಂಡರ್ ವಿಭಾಗದ 125 ಮಂದಿ ಇದ್ದಾರೆ.ಆದರೆ ಸದ್ರಿ 7 ಮಂದಿಗೆ ಮಾತ್ರ ಮತದಾತರ ಗುರುತುಚೀಟಿ ಇದೆ.
ಶುಚಿತ್ವ ಮಿಷನ್ ನೇತೃತ್ವದಲ್ಲಿ ನಿರ್ಮಿಸುವ ಟೇಕ್ ಎ ಬ್ರೇಕ್ ಕೇಂದ್ರಗಳಲ್ಲಿ ಕಾಸರಗೋಡು ಮತ್ತು ಕಾಞಂಗಾಡ್ ಕೇಂದ್ರಗಳಲ್ಲಿ ತಲಾ ಒಂದು ಟ್ರಾನ್ಸ್ ಜೆಂಡರ್ ಸೌಹಾರ್ದ ವಾಗಿ ನಿರ್ಮಿಸಲು ನಿರ್ಧರಿಸಲಾಗಿದೆ.
ಸಮಾಜನೀತಿ ಜಿಲ್ಲಾ ಅಧಿಕಾರಿ ವಿ.ಕೆ.ಷೀಬಾ ಮುಂತಾಝ್, ಜಿಲ್ಲಾ ಶಿಕ್ಷಣಾಧಿಕಾರಿ ಕೆ.ವಿ.ಪುಷ್ಪಾ, ಎನ್.ಜಿ.ಒ. ಪ್ರತಿನಿಧಿ ಮೋಹನನ್ ಮಾಂಗಾಡ್, ಸಹಾಯಕ ವೈದ್ಯಾಧಿಕಾರಿ ಡಾ.ಕೆ.ಕೆ.ಷಾಂಟಿ, ಡಿ.ಪಿ.ಯು. ಸಂರಕ್ಷಣೆ ಅಧಿಕಾರಿ ಕೆ.ಷುಹೈಬ್ ಮೊದಲಾದವರು ಉಪಸ್ಥಿತರಿದ್ದರು.

