HEALTH TIPS

ಅಭಿವೃದ್ಧಿ ಚಟುವಟಿಕೆ ಮತ್ತು ಪರಿಸರಗಳ ನಡುವಿನ ಸಮತೋಲನದಲ್ಲಿನ ಸರ್ಕಾರದ ನಿರ್ಲಕ್ಷವೇ ಹಿಮಸ್ಫೋಟಕ್ಕೆ ಕಾರಣ: ತಜ್ಞರು

             ರೈನಿ: ಅಭಿವೃದ್ಧಿ ಚಟುವಟಿಕೆ ಮತ್ತು ಪರಿಸರಗಳ ನಡುವಿನ ಸಮತೋಲನದಲ್ಲಿನ ಸರ್ಕಾರದ ನಿರ್ಲಕ್ಷವೇ ಹಿಮಸ್ಫೋಟಕ್ಕೆ ಕಾರಣ ಎಂದು ವಿಜ್ಞಾನಿಗಳು, ತಜ್ಞರು, ಪರಿಸರ ಸಂರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

          ಉತ್ತರಾಖಂಡದಲ್ಲಿ ಸಂಭವಿಸಿರುವ ಭಾರಿ ಹಿಮಸ್ಫೋಟ ಮತ್ತು ಪ್ರವಾಹದಿಂದಾಗಿ ಈ ವರೆಗೂ 26ಶವಗಳು ಪತ್ತೆಯಾಗಿದ್ದು, ಇನ್ನೂ 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈ ದೊಡ್ಡ ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

          ಉತ್ತರಾಖಂಡದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ವೇಳೆ ಸರ್ಕಾರ ಪರಿಸರದ ಕುರಿತು ವಹಿಸಿದ ದಿವ್ಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಪರಿಸರ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

                              ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ 
      ಇದೇ ವೇಳೆ ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸುವಂತೆ ಕೋರಿ ಉತ್ತರಾಖಂಡ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ದೆಹಲಿ ಮೂಲದ ಕಾರ್ಯಕರ್ತ ಅಜಯ್ ಗೌತಮ್ ಅವರು ಪಿಐಎಲ್ ದಾಖಲಿಸಿದ್ದು, ಈ ಬಗ್ಗೆ ಮಾತನಾಡಿರುವ ಅವರು, 'ನಾನು 2014 ರಲ್ಲಿ ಒಂದು ಪಿಐಎಲ್ ಸಲ್ಲಿಸಿದ್ದೆ. ರಾಜ್ಯದಲ್ಲಿ ಕಾಮಗಾರಿ ನಡೆಸುವ ವೇಳೆ ಎಚ್ಚರಿಕೆ ವ್ಯವಸ್ಥೆಗಳು ಸೇರಿದಂತೆ ಸಂಪೂರ್ಣ ಮುಂಜಾಗ್ರತಾ ವ್ಯವಸ್ಥೆಗಳನ್ನು ಅಳವಡಿಸಲು ಆದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೆ. ನ್ಯಾಯಾಲಯವು 2018 ರಲ್ಲಿ ಅದೇ ರೀತಿ ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರವು ಈ ಆದೇಶವನ್ನು ಸಮರ್ಥವಾಗಿ ಪಾಲಿಸಿಲ್ಲ ಎಂದು ಹೇಳಿದ್ದಾರೆ.

        ಕೇದಾರನಾಥ, ಬದ್ರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ನಾಲ್ಕು ದೇವಾಲಯಗಳನ್ನು ಸಂಪರ್ಕಿಸುವ 900 ಕಿಲೋಮೀಟರ್ ದೂರದಲ್ಲಿರುವ ಚಾರ್ ಧಾಮ್ ಪರಿಯೋಜನಾ ಕುರಿತು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಹೈ ಪವರ್ ಸಮಿತಿಯ (ಎಚ್‌ಪಿಸಿ) ಅಧ್ಯಕ್ಷ ರವಿ ಚೋಪ್ರಾ ಅವರು ಈ ಬಗ್ಗೆ ಮಾತನಾಡಿ, '2014 ರಲ್ಲಿ ನಾವು ಜಲವಿದ್ಯುತ್ ಯೋಜನೆಗಳ ಬಗ್ಗೆ ಎಚ್ಚರಿಕೆ ನೀಡುವ ವರದಿಯನ್ನು ಸಲ್ಲಿಸಿದ್ದೆವು… ಇದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಮತ್ತು ಅಂತಹ 23 ಯೋಜನೆಗಳನ್ನು ರದ್ದುಗೊಳಿಸಲು ಶಿಫಾರಸು ಮಾಡಿದ್ದೆವು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ರೀತಿಯ ಕ್ರಮಕೈಗೊಂಡಿರಲಿಲ್ಲ. ಇದೀಗ ಈ ಅನಾಹುತಕ್ಕೆ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

ಹಿಮಪಾತ ಅಥವಾ ಹಿಮಸ್ಫೋಟಕ್ಕೆ ತಜ್ಞರು ಎರಡು ಕಾರಣಗಳನ್ನು ನೀಡಿದ್ದು,'ಹಿಮಪಾತವು ಒಂದು ಪರಿಮಾಣವು ಹೆಚ್ಚಿನ ಎತ್ತರದಿಂದ ಚಲಿಸಲು ಪ್ರಾರಂಭಿಸುತ್ತದೆ ಮತ್ತು ಅದರ ಹಾದಿಯಲ್ಲಿರುವ ಎಲ್ಲವನ್ನೂ ನಾಶಮಾಡುವ ವೇಗವನ್ನು ಸಂಗ್ರಹಿಸುತ್ತದೆ. ಈ ಬಗ್ಗೆ ನಮ್ಮ ರಿಮೋಟ್ ಸೆನ್ಸಿಂಗ್ ಏಜೆನ್ಸಿಗಳು ಮೊದಲೇ ಅರಿತು ಮುಂಜಾಗ್ರತೆ ವಹಿಸಬೇಕಿತ್ತು. ಇದೂ ಕೂಡ ದುರಂತಕ್ಕೆ ಮತ್ತೊಂದು ಕಾರಣ. ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

        ಡೆಹ್ರಾಡೂನ್‌ನ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಭೂವಿಜ್ಞಾನ ಸಂಸ್ಥೆಯ ಮಾಜಿ ಹಿಮನದಿಶಾಸ್ತ್ರಜ್ಞ ಡಿ.ಪಿ.ಭೋಭಲ್ ಅವರು ಮಾತನಾಡಿ, 'ಹಿಮಸ್ಫೋಟದ ವೇಳೆ ಸರೋವರ ರಚನೆಯು ಖಚಿತವಾಗಿ ಸಂಭವಿಸಿರಬೇಕು, ಅದು ಅಂತಿಮವಾಗಿ ಪ್ರವಾಹಕ್ಕೆ ಕಾರಣವಾಗಿದೆ. ಆದಾಗ್ಯೂ, ಇದನ್ನು ಪ್ರಚೋದಿಸಿದ ಕಾರಣವನ್ನು ದೃಢೀಕರಿಸಲು ವ್ಯಾಪಕವಾದ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries