ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಆರೋಗ್ಯ ಬ್ಲಾಕ್ ಮಟ್ಟದಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುವ ಕೋವಿಡ್ 19 ನಿಯಂತ್ರಣ ಘಟಕಗಳನ್ನು ಆರಂಭಿಸಲಾಗಿದೆ.
ಕೋವಿಡ್ 19 ಹಾವಳಿ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ತತ್ಸಂಬಂಧಿ ಕಾರ್ಯಗಳಿಗಾಗಿ ಈ ಘಟಕಗಳ ಆರಂಭಮಾಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಬ್ಲಾಕ್ ಮಟ್ಟದ ನಿಯಂತ್ರಣ ಘಟಕಗಳ ಚಟುವಟಿಕೆಗಳನ್ನು ಏಕೀಕರಣ ಗೊಳಿಸುವ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಗಳು, ಸಹಾಯಕ ನೋಡೆಲ್ ಅಧಿಕಾರಿಗಳು, ಸಂಚಾಲಕರು ಮೊದಲಾದವರನ್ನು ನೇಮಿಸಲಾಗಿದೆ. ಆರೋಗ್ಯ ಬ್ಲೋಕ್ ವ್ಯಾಪ್ತಿಯಲ್ಲಿ ಬರುವ ಕೋವಿಡ್ 19 ಕೇಸುಗಳಿಗೆ ಸಂಬಂಧಿಸಿ ಕಾಂಟಾಕ್ಟ್ ಟ್ರೈನಿಂಗ್, ಆಂಬುಲೆನ್ಸ್ ಸೇವೆಗಳು, ಕೋರ್ ಸೆಂಟರ್ ಮೆನೆಜ್ ಮೆಂಟ್, ಕೋವಿಡ್ 19 ಆಸ್ಪತ್ರೆಗಳು, ಸಿ.ಎಫ್.ಎಲ್.ಟಿ.ಗಳು, ಡೊಮಿಸಲರಿ ಕೇರ್ ಸೆಂಟರ್ ಗಳು ಇತ್ಯಾದಿಗಳಲ್ಲಿರುವ ರೋಗಿಗಳ ರೆಫರಲ್ ಸೇವೆಗಳು, ರೋಗಿಗಳಿಗಿರುವ ಮಾನಸಿಕ ಬೆಂಬಲ ಇತ್ಯಶಾದಿ ಬ್ಲೋಕ್ ನಿಯಂತ್ರಣ ಘಟಕಗಳಲ್ಲಿ ನೀಡಲಾಗುವ ಸೇವೆಗಳಾಗಿವೆ. ಈ ಮೇಲೆ ತಿಳಿಸಿರುವ ಸೇವೆಗಳಿಗಾಗಿ ಆಯಾ ಆರೋಗ್ಯ ಬ್ಲೋಕ್ ವ್ಯಾಪ್ತಿಯ ಸಾರ್ವಜನಿಕರು ಬ್ಲೋಕ್ ನಿಯಂತ್ರಣ ಘಟಕಗಳ ಅಧಿಕೃತ ದೂರವಾಣಿ ಸಮಖ್ಯೆಗಳಿಗೆ ಸಂಪರ್ಕಿಸಬಹುದು.
ಕಾಸರಗೋಡು ಜಿಲ್ಲೆಯಲ್ಲಿ ಚಟುವಟಿಕೆ ಆರಂಭಿಸಿರುವ ಬ್ಲಾಕ್ ಮಟ್ಟದ ನಿಯಂತ್ರಣ ಘಟಕಗಳ ದೂರವಾಣಿ ಸಂಖ್ಯೆಗಳು :
1. ಮಂಗಲ್ಪಾಡಿ ತಾಲೂಕು ಆಸ್ಪತ್ರೆ : 8138088919, 8137979919.
2. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ : 9744253755.
3. ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ: 8281125725.
4. ಬೇಡಡ್ಕ ತಾಲೂಕು ಆಸ್ಪತ್ರೆ: 8593814015.
5. ಪನತ್ತಡಿ ತಾಲೂಕು ಆಸ್ಪತ್ರೆ : 9074774669.
6. ಪೆರಿಯ ಸಮುದಾಯ ಆರೋಗ್ಯ ಕೇಂದ್ರ : 7902283424.
7. ಚೆರುವತ್ತೂರು ಸಮುದಾಯ ಆರೋಗ್ಯ ಕೇಂದ್ರ : 9207214720.
8. ನೀಲೇಶ್ವರ ತಾಲೂಕು ಆಸ್ಪತ್ರೆ: 8113923133..


