ಕಾಸರಗೋಡು: ಕೋವಿಡ್ 19 ತಪಾಸಣೆಯ ನಂತರ ಫಲಿತಾಂಶ ಬರುವ ಮುನ್ನ ಅಲೆದಾಡುವುದು ಶಿಕ್ಷಾರ್ಹ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಫಲಿತಾಂಶ ಅರಿಯುವ ಮುನ್ನ ಅಲೆದಾಡಿದರೆ ಕೊರೋನಾ ರೋಗ ಹರಡುವಿಕೆಗೆ ಕಾರಣವಾಗುವ ಭೀತಿಯಿದೆ ಎಂದವರು ತಿಳಿಸಿದರು. ಈ ರೀತಿ ವರ್ತಿಸುವವರ ವಿರುದ್ಧ ಕೇರಳ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸಂಪರ್ಕ ಕಾರಣಗಳಿಂದ ಯಾ ವೈದ್ಯರ ಸಲಹೆಯ ಕಾರಣಗಳಿಂದ ಫಲಿತಾಂಶ ಲಭಿಸುವವರೆಗೆ ಕ್ವಾರೆಂಟೈನ್ ಪಾಲಿಸಬೇಕಿದೆ. ಕೋವಿಡ್ 19 ಖಚಿತಗೊಂಡಲ್ಲಿ ಕಡ್ಡಾಯ 10 ದಿನಗಳ ಕ್ವಾರಂಟೈನ್ ಪಾಲಿಸಬೇಕು. ತದನಂತರ (10 ದಿನಗಳ ನಂತರ) ಆಂಟಿಜೆನ್ ತಪಾಸಣೆಗೆ ಒಳಗಾಗಿ ಫಲಿತಾಂಶ ನೆಗೆಟಿವ್ ಆಗಿದ್ದರೂ, 7 ದಿನಗಳ ಕ್ವಾರೆಂಟೈನ್ ಮತ್ತೆ ಪಾಲಿಸಬೇಕು. ತದನಂತರವಷ್ಟೇ ಹೊರಗಿಳಿಯಬಹುದಾಗಿದೆ ಎಂದವರು ತಿಳಿಸಿರುವರು.


