ಕಾಸರಗೋಡು: ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿರುವ ಇತರ ರಾಜ್ಯಗಳ ಕಾರ್ಮಿಕ ಮಾಹಿತಿ ಸಂಗ್ರಹಿಸುತ್ತಿದೆ. ನೇರವಾಗಿ ಯಾ ಪರೋಕ್ಷವಾಗಿ ( ನೌಕರಿಯ ಮಾಲೀಕ, ಇವರು ವಾಸಿಸುತ್ತಿರುವ ಕಟ್ಟಡಗಳ ಮಾಲೀಕರ ಮುಖಾಂತರ) ಮಾಹಿತಿ ಸಂಗ್ರಹಿಸಲಾಗುವುದು. ಹೆಸರು, ವಯಸ್ಸು, ಮೂಲ ಪ್ರದೇಶ, ಆದಾರ್ ನಂಬ್ರ, ವಸತಿ/ ನೌಕರಿ ನಡೆಸುತ್ತಿರುವ ಜಾಗ, ಮೊಬೈಲ್ ನಂಬ್ರ( ವಾಟ್ಸ್ ಆಪ್), ವಾಕ್ಸಿನೇಷನ್ ಪಡೆಯಲಾಗಿದೆಯೇ, ಕೇರಳಕ್ಕೆ ಆಗಮಿಸಿರುವ ದಿನಾಂಕ ಇತ್ಯಾದಿ ಮಾಹಿತಿಗಳನ್ನು ಕಾರ್ಮಿಕ ಅಧಿಕಾರಿಗೆ ಸಲ್ಲಿಸಬೇಕು. ಇತರ ರಾಜ್ಯಗಳ ಕಾರ್ಮಿಕರಿಗೆ ಕೋವಿಡ್ ಸಂಬಮಧ ಸಂದೇಹಗಳಿದ್ದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಜನಜಾಗೃತಿ, ಪ್ರತ್ಯೇಕ ವಾಕ್ಸಿನೇಷನ್ ಶಿಬಿರಗಳು ಇತ್ಯಾದಿ ನಡೆಸುವ ವೇಳೆ ಮಾಹಿತಿಗಳನ್ನು ಮೊಬೈಲ್ ನಂಬ್ರಕ್ಕೆ ತಿಳಿಸಲಾಗುವುದು.
ಕಾಸರಗೋಡು, ಮಂಜೇಶ್ವರ ತಾಲೂಕುಗಳ ಇತರ ರಾಜ್ಯಗಳ ಕಾರ್ಮಿಕರ ಮಾಹಿತಿ ನಿಡಿಕೆಗೆ ದೂರವಾಣಿ, ವಾಟ್ಸ್ ಆಪ್ ನಂಬ್ರ: 9495744002, ಈ ಮೇಲ್ ವಿಳಾಸ : ಕಾಞಂಗಾಡ್, ವೆಳ್ಳರಿಕುಂಡ್ ಪ್ರದೇಶಗಳ ಮಂದಿಗಾಗಿ ಮಾಹಿತಿ ನೀಡಿಕೆಗೆ ದೂರವಾಣಿ, ವಾಟ್ಸ್ ಆಪ್ ಸಂಖ್ಯೆ: 9946261737, ಈ ಮೇಲ್ :
ಹೆಚ್ಚುವರಿ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆಗಳು: 04994-256950, ಕಾಸರಗೋಡು ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿ: 04994-257850, ಕಾಞಂಗಾಡ್ ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿ: 0467-2204602.
ಇತರ ರಾಜ್ಯಗಳ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ನೌಕರಿ ಮಾಲೀಕರು, ಸ್ವಯಂ ಸೇವಾ ಸಮಘಟನೆಗಳು ಮೊದಲಾದವರು ಪೂರ್ಣ ಸಹಕಾರ ಒದಗಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್ ವಿನಂತಿಸಿದರು.


