ತಿರುವನಂತಪುರ: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಪುತ್ರ ಆಶಿಶ್ ಯೆಚೂರಿ ಕೊರೊನಾಕ್ಕೆ ಬಲಿಯಾದ ಹಿನ್ನೆಲೆಯಲ್ಲಿ ಅವರ ನಿಧನಕ್ಕೆ ಯುವ ಕಾಂಗ್ರೆಸ್ ಮಾಜಿ ರಾಜ್ಯ ಕಾರ್ಯದರ್ಶಿ ಚಾಂಡಿ ಉಮ್ಮನ್ ಸಂತಾಪ ಸೂಚಿಸಿದ್ದಾರೆ.
ತಾನು ಮತ್ತು ಆಶಿಶ್ ಕಾಲೇಜಿನಲ್ಲಿ ಸಹಪಾಠಿಗಳು ಮತ್ತು ಸ್ನೇಹಿತರಾಗಿದ್ದೆವು. ಕಾಲೇಜು ಚುನಾವಣೆಯಲ್ಲಿ ಆಶಿಶ್ ತನ್ನೊಂದಿಗೆ ಬೆಂಬಲವಾಗಿದ್ದರು ಎಂದು ಚಾಂಡಿ ಉಮ್ಮನ್ ಫೇಸ್‍ಬುಕ್ ನಲ್ಲಿ ಬರೆದಿದ್ದಾರೆ.
ಸೈದ್ಧಾಂತಿಕ ವ್ಯತ್ಯಾಸಗಳು ಯಾವುವು ಎಂದು ನಾವು ಚರ್ಚಿಸಿಲ್ಲ. ಸೈದ್ಧಾಂತಿಕ ವ್ಯತ್ಯಾಸಗಳು ನಮ್ಮನ್ನು ಎಂದಿಗೂ ದೂರವಿಟ್ಟಿಲ್ಲ. ಅವರು ಎಲ್ಲರೊಂದಿಗೆ ಸ್ನೇಹಪರರಾಗಿದ್ದರು ಮತ್ತು ಅವರ ಸಹಪಾಠಿಗಳೊಂದಿಗೆ ಯಾವಾಗಲೂ ಸ್ನೇಹಪರರಾಗಿದ್ದರು. ಆಶಿಶ್ ಅವರ ನಿಧನ ಸುದ್ದಿ ಕಳವಳಗೊಳಿಸಿದೆ ಎಂದು ಚಾಂಡಿ ಉಮ್ಮನ್ ಪೇಸ್ ಬುಕ್ ಪೋಸ್ಟ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.


