ತ್ರಿಶೂರ್: ಶುಕ್ರವಾರದಿಂದ ಕೇವಲ ಒಂದು ಸಾವಿರ ಜನರಿಗೆ ಗುರುವಾಯೂರ್ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಶನಿವಾರದಿಂದ ದೇವಾಲಯದಲ್ಲಿ ವಿವಾಹಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕ್ಷೇತ್ರದ ನಿರ್ವಾಹಕರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ಹರಡುವಿಕೆಗೆ ಕಠಿಣ ನಿರ್ಬಂಧಗಳನ್ನು ಹೇರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ. ಆನ್‍ಲೈನ್‍ನಲ್ಲಿ ಬುಕ್ ಮಾಡುವ 1000 ಜನರಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ. ಜಿಲ್ಲಾಧಿಕಾರಿ ಮತ್ತು ವೈದ್ಯಕೀಯ ಅಧಿಕಾರಿಯ ಸೂಚನೆಯ ಮೇರೆಗೆ ದೇವಸ್ವಂ ಅಧ್ಯಕ್ಷರು ಮತ್ತು ನಿರ್ವಾಹಕರು ಈ ನಿರ್ಧಾರ ಕೈಗೊಂಡಿದ್ದಾರೆ. ಆನೆ ಲಾಯಕ್ಕೆ ಭೇಟಿ ನೀಡುವವರನ್ನು ಶುಕ್ರವಾರದಿಂದಲೇ ನಿಷೇಧಿಸಲಾಗಿದೆ.


