ಕೊಚ್ಚಿ: ಹೈಕೋರ್ಟ್ ನ್ಯಾಯಾಧೀಶರಿಗೆ ಕೊರೋನಾ ಸೋಮಕು ದೃಢಪಟ್ಟಿದ್ದು ಆತಂಕ ಮೂಡಿಸಿದೆ. ನ್ಯಾಯಮೂರ್ತಿ ಪಿ. ಗೋಪಿನಾಥ್ ಮತ್ತು ನ್ಯಾಯಮೂರ್ತಿ ಸಿಯಾದ್ ರಹಮಾನ್ ಅವರಿಗೆ ಸೋಂಕು ದೃಢಪಟ್ಟಿದೆ. ಇಬ್ಬರಿಗೂ ಬುಧವಾರ ಸೋಂಕು ಪತ್ತೆಯಾಯಿತು.
ಪ್ರಸ್ತುತ ಬೇಸಿಗೆಯ ಮಧ್ಯದ ಬಿಡುವಿಗಾಗಿ ನ್ಯಾಯಾಲಯವನ್ನು ಮುಚ್ಚಲಾಗಿದೆ. ಮಂಗಳವಾರ ಮತ್ತು ಶುಕ್ರವಾರದಂದು ಕೆಲವೇ ಕೆಲವು ನ್ಯಾಯಾಧೀಶರ ರಜಾ ಕಾಲದ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಆದ್ದರಿಂದ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಮತ್ತೊಬ್ಬ ನ್ಯಾಯಾಧೀಶರ ಪುತ್ರಿಗೂ ಸೋಂಕು ದೃಢಪಟ್ಟಿರುವುದಾಗಿ ಹೇಳಲಾಗಿದೆ.





