ತಿರುವನಂತಪುರ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಉಪಕ್ರಮಗಳಿಗೆ ತೊಡಗಿಸಿಕೊಳ್ಳಲಾಗುವುದು ಮತ್ತು ನಿರ್ಬಂಧಗಳನ್ನು ಬಿಗಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಕೋವಿಡ್ ಪರಿಶೀಲನಾ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಈ ವಿಷಯವನ್ನು ಸ್ಪಷ್ಟಪಡಿಸಿದರು. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಚಿಕಿತ್ಸಾ ಸೌಲಭ್ಯವನ್ನು ಸಿದ್ಧಪಡಿಸಲು ಆದ್ಯತೆ ನೀಡಲಾಗುವುದು. ತಾಲ್ಲೂಕಿನಲ್ಲಿ ಕನಿಷ್ಠ ಒಂದು ಸಿಎಫ್‍ಎಲ್‍ಟಿಸಿ ಇರುತ್ತದೆ ಎಂದರು.
ಸಿಎಫ್‍ಎಲ್‍ಟಿಸಿ ಕೇಂದ್ರಗಳು:
ಸಿಎಫ್‍ಎಲ್‍ಟಿಸಿ ಇಲ್ಲದ ತಾಲ್ಲೂಕುಗಳನ್ನು ಶೀಘ್ರದಲ್ಲೇ ಗುರುತಿಸಲಾಗುವುದು. ಮತ್ತು ರೋಗಿಗಳ ಸಂಖ್ಯೆ ಹೆಚ್ಚಾದಂತೆ ಹೆಚ್ಚಿನ ಸಿಎಫ್‍ಎಲ್‍ಟಿಸಿಗಳನ್ನು ತೆರೆಯಲಾಗುತ್ತದೆ. ಕೋವಿಡ್ ಶೇಕಡಾ 35 ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಯುದ್ಧದೋಪಾದಿಯಲ್ಲಿ ಮಧ್ಯಪ್ರವೇಶಿಸುವುದಾಗಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೋವಿಡ್ ಆಸ್ಪತ್ರೆಗಳ ಮೇಲ್ವಿಚಾರಣೆಗಾಗಿ ರಾಜ್ಯ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗುವುದು. ಈ ಉದ್ದೇಶಕ್ಕಾಗಿ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಲಾಯಿತು. ಪರಿಸ್ಥಿತಿಯನ್ನು ಪ್ರತಿದಿನವೂ ನಿಖರವಾಗಿ ವರದಿ ಮಾಡಬೇಕು ಎಂದು ಸಿಎಂ ನಿರ್ದೇಶನ ನೀಡಿದರು.
ಲಸಿಕೆ ವಿತರಣೆಗೆ ಸೌಲಭ್ಯ:
ಕೆಲವು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕಿಕ್ಕಿರಿದು ಜನರು ಸೇರುತ್ತಿದ್ದಾರೆ. ಲಸಿಕೆ ಮೇ 1 ರ ನಂತರ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಭ್ಯವಾಗಲಿದ್ದು, ಇದು ಇನ್ನಷ್ಟು ದಟ್ಟಣೆಗೆ ಕಾರಣವಾಗಬಹುದು. ಜನರು ಲಸಿಕೆಯನ್ನು ತೊಂದರೆ ಇಲ್ಲದೆ ತೆಗೆದುಕೊಳ್ಳುವ ವಾತಾವರಣವನ್ನು ಸೃಷ್ಟಿಸಲು ನಿರ್ಧರಿಸಲಾಗಿದೆ. ಎಲ್ಲಾ ಸ್ಥಳಗಳಲ್ಲಿ ಆನ್‍ಲೈನ್ ಬುಕಿಂಗ್ ಸೌಲಭ್ಯ ಲಭ್ಯವಿರಬೇಕು. ಆನ್‍ಲೈನ್‍ನಲ್ಲಿ ಕಾಯ್ದಿರಿಸಿದ ಮತ್ತು ಅಧಿಸೂಚನೆಯನ್ನು ಸ್ವೀಕರಿಸಿದವರಿಗೆ ಮಾತ್ರ ಲಸಿಕೆ ವಿತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಕೋವಿಡ್ ಜಾಗೃತಿ ಬಲಪಡಿಸಬೇಕು. ಅದಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಎಸ್‍ಎಂಎಸ್ ಅಭಿಯಾನವನ್ನು ಬಲಪಡಿಸಲಾಗುತ್ತದೆ.
ಸ್ಥಳೀಯಾಡಳಿತ ಸಂಸ್ಥೆಗಳ ಪಾತ್ರ:
ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಒಳಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ. ಸ್ಥಳೀಯ ಆಡಳಿತ ಮಂಡಳಿಗಳ ಭಾಗವಹಿಸುವಿಕೆ ಅತ್ಯುನ್ನತವಾಗಿದೆ. ಮೊದಲ ಕೋವಿಡ್ ಹಂತದಲ್ಲಿ ಪ್ರಮುಖ ಅಂಶವೆಂದರೆ ಸ್ಥಳೀಯ ಸರ್ಕಾರಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಸಮರ್ಥವಾಗಿ ಮುನ್ನಡೆದುದಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಆಡಳಿತ ಮಂಡಳಿಗಳು ಅಧಿಕಾರಕ್ಕೆ ಬಂದಿವೆ. ಈಗಿರುವ ನೂತನ ಸದಸ್ಯರಲ್ಲಿ ಅನೇಕರು ಮೊದಲ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲ. ಜನ ಪ್ರತಿನಿಧಿಗಳಿಗೆ ಅಗತ್ಯ ತರಬೇತಿ ಮತ್ತು ಜಾಗೃತಿ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿವಾರಿಸಲು ಸ್ಥಳೀಯ ಸಂಸ್ಥೆಗಳ ಪ್ರಮುಖ ಒಳಗೊಳ್ಳುವಿಕೆ ಇರಬೇಕು.
ಜನರಿಗೆ ಎಚ್ಚರಿಕೆ ನೀಡಬೇಕಾಗಿದೆ:
ಜನರಿಗೆ ಧ್ವನಿವರ್ಧಕ ಎಚ್ಚರಿಕೆಗಳು, ಅಗತ್ಯ ಸೂಚನೆಗಳು ಮತ್ತು ಪೋಸ್ಟರ್‍ಗಳನ್ನು ಸ್ಥಳೀಯ ಸಂಸ್ಥೆಯ ಮಿತಿಯಲ್ಲಿ ಆಯೋಜಿಸಬೇಕು. ಪ್ರದೇಶದ ಕೋವಿಡ್ ಸ್ಥಿತಿಯನ್ನು ತಿಳಿಸಲು ಗ್ರಂಥಾಲಯಗಳು ಮತ್ತು ಕ್ಲಬ್‍ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಚಟುವಟಿಕೆಗಳನ್ನು ನಡೆಸಲು ಸ್ಥಳೀಯ ಅಧಿಕಾರಿಗಳು ಸಿದ್ಧರಾಗಿರಬೇಕು. ಅತಿ ಪುಟ್ಟ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಪಡೆಯಲು ಕಷ್ಟವಾಗುತ್ತದೆ. ಸ್ಥಳೀಯ ಸಂಸ್ಥೆಗಳು ಸಹ ಅವರಿಗೆ ಆಹಾರ ಮತ್ತು ಔಷಧಿ ನೀಡಲು ಮುಂದಾಗಲಿವೆ ಎಂದು ಮುಖ್ಯಮಂತ್ರಿ ಹೇಳಿರುವರು.
ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ:
ಈಗ ಅಸ್ತಿತ್ವದಲ್ಲಿರುವ ಸ್ವಯಂಸೇವಕ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ. ಕೆಲವರು ಈಗ ವಿರಮಿಸಿರಬಹುದು. ಅಗತ್ಯವಿದ್ದರೆ ಹೊಸ ಸ್ವಯಂಸೇವಕರನ್ನು ಗುರುತಿಸಿ ಸಜ್ಜುಗೊಳಿಸಬೇಕು. ಇದು ತುರ್ತು ಆಗಬೇಕಿದೆ.
ಶೇಕಡಾ 50 ರಷ್ಟು ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ ಒದಗಿಸಲಾಗುವುದು. ಕೋವಿಡ್ ನಿಯಂತ್ರಣ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳು ಇತರ ಉದ್ಯೋಗಿಗಳನ್ನು ಬಳಸಬೇಕು. ಖಾಸಗಿ ವಲಯದಲ್ಲೂ ಮನೆಯಿಂದಲೇ ಕಾರ್ಯಗಳನ್ನು ಜಾರಿಗೆ ತರಲು ಸಂಸ್ಥೆಗಳ ಮುಖ್ಯಸ್ಥರು ಕಾಳಜಿ ವಹಿಸಬೇಕು. ಏಪ್ರಿಲ್ 24 ರ ಶನಿವಾರ ರಜೆ ಘೋಷಿಸಲಾಗಿದೆ. ಆದರೆ ಶನಿವಾರ ನಡೆಯಲಿರುವ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಅಗತ್ಯ ಸೇವೆಗಳು ಶನಿವಾರ ಮತ್ತು ಭಾನುವಾರದಂದು ಮಾತ್ರ:
24 ಮತ್ತು 25 ರಂದು ಅಗತ್ಯ ಸೇವೆಗಳು ಮಾತ್ರ ಇರಲಿವೆ. ಈಗಾಗಲೇ ನಿರ್ಧಸಿರುವ ವಿವಾಹಗಳು ಮತ್ತು ಇತರ ಕಾರ್ಯಕ್ರಮಗಳಿಗೆ ನಿಬರ್ಂಧದಿಂದ ಮುಕ್ತಗೊಳಿಸಲಾಗಿದೆ. ಆದಾಗ್ಯೂ, ಅಂತಹ ಸಮಾರಂಭಗಳಿಗೆ ಪ್ರಸ್ತುತ 75 ಜನರ ಮಿತಿ ಇದೆ. ಪಾಲ್ಗೊಳ್ಳುವಿಕೆ ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಪರಿಸ್ಥಿತಿಯನ್ನು ಅವಲೋಕನ ನಡೆಸಲಾಗುತ್ತದೆ. ಜನರ ಮಿತಿಯನ್ನು ಕಡಿಮೆ ಮಾಡಲಾಗುತ್ತದೆ.
ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮ ಶಿಕ್ಷಣ ಮಾತ್ರವಲ್ಲದೆ ಜಾಗರೂಕತೆ ಮತ್ತು ಸಮರ್ಪಣೆ ಕೂಡ ಹೆಚ್ಚು ಅಗತ್ಯವಾಗಿರುತ್ತದೆ. ಈಗ ಹೆಚ್ಚು ಹೆಚ್ಚು ಜನರು ವೈರಸ್ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬ ವರದಿಗಳಿವೆ.
ತರಗತಿಗಳು ಆನ್‍ಲೈನ್‍ನಲ್ಲಿ ಮಾತ್ರ:
ಎಲ್ಲಾ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ತರಗತಿಗಳನ್ನು ಮಾತ್ರ ನೀಡಲಿವೆ. ನೇರವಾದ ಬೋಧನಾ ತರಗತಿಗಳನ್ನು ನಡೆಸುವ ಅಗತ್ಯವಿಲ್ಲ. ಬೇಸಿಗೆ ಶಿಬಿರಗಳು ಎಲ್ಲಿಯಾದರೂ ಇದ್ದರೆ ಅವನ್ನು ತಕ್ಷಣ ಮೊಟಕುಗೊಳಿಸಬೇಕು. ಕಡಲತೀರಗಳು ಮತ್ತು ಉದ್ಯಾನವನಗಳಲ್ಲಿ ಪೆÇ್ರೀಟೋಕಾಲ್ನೊಂದಿಗೆ ಸಂಪೂರ್ಣ ಅನುಸರಣೆ ಖಚಿತಪಡಿಸಿಕೊಳ್ಳಬೇಕು. ಪೋಲೀಸ್ ವಲಯದಮೇಜಿಸ್ಟ್ರೇಟರ್ ಗಳು ಇದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ರಾತ್ರಿ ನಿಯಂತ್ರಣ ಬಿಗಿಯಾಗಿ ಜಾರಿಯಲ್ಲಿರಲಿವೆ. ಆದರೆ ರಾತ್ರಿಯಲ್ಲಿ ಆಹಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಹೋಟೆಲ್ ಗಳಿಂದ ಆಹಾರ ಪೊಟ್ಟಣ ವಿತರಣೆ ಇರುತ್ತವೆ. ಕಷ್ಟವಿಲ್ಲದೆ ಕಾಳಜಿ ವಹಿಸುವಂತೆ ಸೂಚನೆ ನೀಡಲಾಗುತ್ತದೆ.
ವಾರ್ಡ್ ಮಟ್ಟದ ಮುಖ್ಯ ಸಮಿತಿಯನ್ನು ಪುನರುಜ್ಜೀವನಗೊಳಿಸಲಾಗುವುದು:
ಕೋವಿಡ್ ಒಂದನೇ ಹಂತದಲ್ಲಿ ರಚಿಸÀಲಾಗಿದ್ದ ವಾರ್ಡ್ ಮಟ್ಟದ ಮುಖ್ಯ ಸಮಿತಿಯನ್ನು ಪುನರುಜ್ಜೀವನಗೊಳಿಸಲಾಗುವುದು. ಅದರ ಕೆಳಗೆ, ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ವಾರ್ಡ್ ಸದಸ್ಯ, ಆಶಾ ವರ್ಕರ್, ಆರೋಗ್ಯ ಕಾರ್ಯಕರ್ತರು, ಪೋಲೀಸ್ ಪ್ರತಿನಿಧಿ, ಸ್ವಯಂಸೇವಕರು, ಕಂದಾಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಎಲ್ಲೆಡೆ ರಚಿಸಬೇಕು. ನಮಗೆ ಆಮ್ಲಜನಕದ ಅಗತ್ಯವಿದೆ. ನಮ್ಮ ಅಗತ್ಯವು ಖಚಿತವಾದಾಗ ಮಾತ್ರ ಆಮ್ಲಜನಕ ವಿತರಣೆ ನಡೆಯಲಿದೆ. ಅನ್ಯರಾಜ್ಯ ಕಾರ್ಮಿಕರಿಗೆ ಆಯಾ ಸ್ಥಳಗಳಿಂದ ಲಸಿಕೆ ಹಾಕಿಸಬೇಕು. ಕೆಲಸವಿಲ್ಲದೆ ಉದ್ಯೋಗ ರಹಿತರಾಗಿದ್ದರೆ, ಅವರಿಗೆ ಆಹಾರವನ್ನು ತಯಾರಿಸಲು ಕಾಳಜಿ ವಹಿಸಬೇಕು.
ಸರ್ವಪಕ್ಷ ಸಭೆ:
ಖಾಸಗಿ ಆಸ್ಪತ್ರೆಗಳು ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಚಟುವಟಿಕೆಗಳಲ್ಲಿ ಭಾಗಿಯಾಗಲಿವೆ. ಇದಕ್ಕಾಗಿ ಅವರ ಸಭೆ ಕರೆಯಲಾಗುವುದು. ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆ ಕರೆಯಲು ನಿರ್ಧರಿಸಿದೆ. ನಿರ್ಬಂಧಗಳಿಂದ ಸಾಮಾನ್ಯವಾಗಿ ಜನರಿಗೆ ಕಷ್ಟಕರವಾಗಿಸುತ್ತದೆ ಎಂಬುದು ನಿಜ. ಎಲ್ಲರೂ ಸಹಕರಿಸಬೇಕು. ನೆರೆಯ ರಾಜ್ಯಗಳಲ್ಲಿ ಸೋಂಕು ತೀವ್ರ ಉಲ್ಬಣತೆ ಪಡೆದಿದೆ. ಅದನ್ನು ಗಮನದಲ್ಲಿಟ್ಟುಕೊಂಡು ತುಂಬಾ ಜಾಗರೂಕರಾಗಿರಬೇಕು.


