ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಆಯುಷ್ ಇಲಾಖೆ(ಆಯುರ್ವೇದ) ಮುಖಾಂತರ ನಡೆಸುವ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಕೋವಿಡ್ ಪ್ರತಿರೋಧ, ಗಂಭೀರ ಸ್ವಭಾವದ್ದಲ್ಲದ ಕೋವಿಡ್ ರೋಗಿಗಳ ಚಿಕಿತ್ಸೆ, ಪುನರ್ವಸತಿ ಇತ್ಯಾದಿ ಗುರಿಯಾಗಿಸಿ ಆಯುರ್ ರಕ್ಷಾ ಕ್ಲಿನಿಕ್ ಗಳು ಎಲ್ಲ ಸರಕಾರಿ ಆಯುರ್ ವೇದ ಆಸ್ಪತ್ರೆಗಳಲ್ಲೂ ಚಟುವಟಿಕೆ ನಡೆಸುತ್ತಿವೆ. ಜಿಲ್ಲೆಯ ಭಾರತೀಯ ಚಿಕಿತ್ಸಾ ಇಲಾಖೆಯ ವ್ಯಾಪ್ತಿಯ ಎಲ್ಲ ಸಂಸ್ಥೆಗಳಲ್ಲೂ ಕೋವಿಡ್ ಪ್ರತಿರೋಧಕ್ಕೆ ಸಜ್ಜುಗೊಂಡಿವೆ ಎಂದು ಭಾರತೀಯ ಚಿಕಿತ್ಸಾ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಡಸ್ಟೆಲ್ಲ ಡೇವಿಡ್ ತಿಳಿಸಿದರು.
ಪ್ರತ್ಯೇಕ ಯೋಜನೆಗಳು :
60 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಂದಿಗೆ ರೋಗಪ್ರತಿರೋಧ ಶಕ್ತಿ ಹೆಚ್ಚಳಗೊಳಿಸುವ ಸ್ವಾಸ್ಥ್ಯ ಯೋಜನೆ, 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಮಂದಿಗೆ ಆರೋಗ್ಯ ಸಂರಕ್ಷಣೆಗೆ ಸುಖಾಯುಷ್ಯ, ಕ್ವಾರೆಂಟೈನ್ ನಲ್ಲಿರುವ ಮಂದಿಗೆ ಪ್ರತಿರೋಧಕ್ಕಾಗಿ ಅಮೃತಂ, ಕ್ಯಾಟಗರಿ ಎ ಕೋವಿಡ್ ರೋಗಿಗಳಿಗೆ ಭೇಷಜಂ, ಕೋವಿಡ್ ನೆಗೆಟಿವ್ ಆದವರ ಆರೋಗ್ಯ ಹೆಚ್ಚಳಕ್ಕೆ ಪುನರ್ ಜನಿ ಯೋಜನೆ ಇತ್ಯಾದಿಗಳು ಆಯುರ್ ರಕ್ಷಾ ಕ್ಲಿನಿಕ್ ಗಳ ಮೂಲಕ ಜಾರಿಗೊಳ್ಳುತ್ತಿವೆ. ಕ್ಯಾಟಗರಿ ಎ ಯಲ್ಲಿ ಸೇರಿರುವ ಕೋವಿಡ್ ರೋಗಿಗಳನ್ನು ( ಗಂಭೀರ ಸ್ವಭಾವದ್ದಲ್ಲದ ರೋಗಿಗಳು) ಭೇಷಜಂ ಯೋಜನೆಯಲ್ಲಿ ಅಳವಡಿಸಿ ಚಿಕಿತ್ಸೆ ಒದಗಿಸಲಾಗುವುದು. ಯಾವುದೇ ಸಂ
ಶಯಗಳಿರುವವರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ : 0467-283277, 9495546171.


