ತಿರುವನಂತಪುರ: ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ರಾಜ್ಯಾದ್ಯಂತ ಲಾಕ್ ಡೌನ್ ಸಮನಾದ ನಿಯಂತ್ರಣಗಳು ಇರಲಿದೆ. ಆದರೆ ಇಂದು ನಡೆಯಲಿರುವ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಯಥಾ ಪ್ರಕಾರ ನಿಗದಿಯಾದಂತೆ ನಡೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದಕ್ಕಾಗಿ ಪ್ರಯಾಣಿಸುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಪೋಷಕರು ಶಾಲೆಯಿಂದ ತಕ್ಷಣ ಮರಳಬೇಕು. ಪರೀಕ್ಷೆ ಮುಗಿದ ಬಳಿಕವಷ್ಟೇ ಶಾಲೆಗೆ ತೆರಳಿ ಮತ್ತೆ ಮಕ್ಕಳನ್ನು ಕರೆದೊಯ್ಯಬೇಕು. ಶಾಲಾ ಆವರಣದಲ್ಲಿ ಗುಂಪು ಸೇರಬಾರದು. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು. ಪ್ರಯಾಣದ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.


