ತಿರುವನಂತಪುರ: ಕೇರಳದಲ್ಲಿ ಲಾಕ್ ಡೌನ್ ಹೇರಿಕೆಯ ಮೂರನೇ ದಿನವಾದ ಇಂದು ರಾಜ್ಯವ್ಯಾಪಕವಾಗಿ ಒಳ್ಳೆಯ ಸಹಕಾರ ಕಂಡುಬಂದಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಪೋಲೀಸ್ ತಪಾಸಣೆ ರಾಜ್ಯಾದ್ಯಂತ ವ್ಯಾಪಕವಾಗಿದೆ. ಪೋಲೀಸ್ ಪಾಸ್ ಗಾಗಿ 2.5 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದರೂ, ಅಗತ್ಯವಿರುವವರಿಗೆ ಮಾತ್ರ ಪಾಸ್ ನೀಡಲಾಗಿದೆ.
ಸಂಪೂರ್ಣ ಲಾಕ್‍ಡೌನ್ ಘೋಷಣೆಯಾದ ಬಳಿಕ ಇಂದು ಮೊದಲ ಕರ್ತವ್ಯದ ದಿನವಾಗಿದೆ(ಸ|ಓಮವಾರ) ಜನರು ನಿರ್ಬಂಧಗಳಿಗೆ ಜವಾಬ್ದಾರಿಯುತರಾಗಿ ಸಹಕರಿಸಿರುವುದಾಗಿ ಸರ್ಕಾರ ತಿಳಿಸಿದೆ. ಅಗತ್ಯ ಸೇವಾ ಸಿಬ್ಬಂದಿ ಗುರುತಿನ ದಾಖಲೆಗಳೊಂದಿಗೆ ಮನೆಯಿಂದ ಹೊರಗೆ ತೆರಳಲು ಅನುಮತಿ ನೀಡಲಾಗಿದೆ. ಅಗತ್ಯವಿರುವವರಿಗೆ ಪೋಲೀಸರು ಪಾಸ್ ನೀಡಿದ್ದರು. ಅನಗತ್ಯವಾಗಿ ಸುತ್ತಾಡುತ್ತಿದ್ದವರನ್ನು ಗುರುತಿಸಿ ವಾಪಸ್ ಕಳುಹಿಸಿದ್ದಾರೆ. ಬೆಳಿಗ್ಗೆ ಕಚೇರಿ ಸಮಯದಲ್ಲಿ ರಸ್ತೆಗಳು ಕಾರ್ಯನಿರತವಾಗಿತ್ತು. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಪೋಲೀಸರು ಕಣ್ಗಾವಲು ಹೆಚ್ಚಿಸಿದ್ದಾರೆ.
ಈವರೆಗೆ 2,55,628 ಮಂದಿ ಜನರು ತುರ್ತು ಪ್ರಯಾಣಕ್ಕಾಗಿ ಪೋಲೀಸರ ಆನ್‍ಲೈನ್ ಇ-ಪಾಸ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 22,790 ಮಂದಿ ಜನರಿಗೆ ಪ್ರಯಾಣ ಪರವಾನಗಿ ನೀಡಲಾಗಿದೆ. 1,40,642 ಮಂದಿ ಜನರಿಗೆ ಅನುಮತಿ ನಿರಾಕರಿಸಲಾಗಿದೆ. 92,196 ಅರ್ಜಿಗಳು ಪರಿಗಣನೆಯಲ್ಲಿವೆ. ಪಾಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿ ನಿರ್ದೇಶನ ನೀಡಿದ್ದಾರೆ.



