ತಿರುವನಂತಪುರ: ರಾಜ್ಯದಲ್ಲಿ ಇಂದು 12,078 ಮಂದಿ ಜನರಿಗೆ ಕೊರೋನಾ ದೃಢಪಟ್ಟಿದೆ. ಎರ್ನಾಕುಳಂ 1461, ಕೊಲ್ಲಂ 1325, ಮಲಪ್ಪುರಂ 1287, ತಿರುವನಂತಪುರ 1248, ಕೋಝಿಕೋಡ್ 1061, ತ್ರಿಶೂರ್ 1025, ಪಾಲಕ್ಕಾಡ್ 990, ಆಲಪ್ಪುಳ 766, ಕಣ್ಣೂರು 696, ಕೊಟ್ಟಾಯಂ 594, ಪತ್ತನಂತಿಟ್ಟು 525, ಕಾಸರಗೋಡು 439, ವಯನಾಡ್ 352, ಇಡುಕ್ಕಿ 309 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,16,507 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.37 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 2,23,97,780 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 136 ಮಂದಿ ಸೋಂಕು ಬಾಧಿಸಿ ಮೃತಪಟ್ಟಿದ್ದಾರೆ. ಇದು ಒಟ್ಟು ಸಾವಿನ ಸಂಖ್ಯೆ 12,581 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 94 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,250 ಮಂದಿ ಜನರಿಗೆ ಸೋಂಕು ತಗುಲಿತು. 657 ಮಂದಿಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 1419, ಕೊಲ್ಲಂ 1319, ಮಲಪ್ಪುರಂ 1245, ತಿರುವನಂತಪುರ 1169, ಕೋಝಿಕೋಡ್ 1034, ತ್ರಿಶೂರ್ 1018, ಪಾಲಕ್ಕಾಡ್ 521, ಆಲಪ್ಪುಳ 756, ಕಣ್ಣೂರು 636, ಕೊಟ್ಟಾಯಂ 570, ಪತ್ತನಂತಿಟ್ಟು 517, ಕಾಸರಗೋಡು 422, ವಯನಾಡ್ 332, ಇಡುಕ್ಕಿ 292 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 77 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 21, ಕಾಸರಗೋಡು 13, ಎರ್ನಾಕುಳಂ 10, ಪಾಲಕ್ಕಾಡ್ 8, ಕೋಝಿಕೋಡ್, ವಯನಾಡ್ ತಲಾ 6, ತಿರುವನಂತಪುರ 4, ಆಲಪ್ಪುಳ, ತ್ರಿಶೂರ್ ತಲಾ 2, ಕೊಲ್ಲಂ, ಪತ್ತನಂತಿಟ್ಟು, ಕೊಟ್ಟಾಯಂ, ಇಡಕ್ಕಿ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,469 ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1718, ಕೊಲ್ಲಂ 470, ಪತ್ತನಂತಿಟ್ಟು 245, ಆಲಪ್ಪುಳ 820, ಕೊಟ್ಟಾಯಂ 655, ಇಡುಕ್ಕಿ 472, ಎರ್ನಾಕುಳಂ 2006, ತ್ರಿಶೂರ್ 1185, ಪಾಲಕ್ಕಾಡ್ 1011, ಮಲಪ್ಪುರಂ 904, ಕೋಝಿಕೋಡ್ 888, ವಯನಾಡ್ 245, ಕಣ್ಣೂರು 433,ಕಾಸರಗೋಡು 417 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 99,859 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,41,436 ಮಂದಿ ಜನರನ್ನು ಗುಣಪಡಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,06,706 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,80,559 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,147 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,445 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ 8 ರ ಕೆಳಗೆ 313, ಟಿಪಿಆರ್. 8 ರಿಂದ 16 ರ ನಡುವೆ 545, ಟಿಪಿಆರ್. 16 ರಿಂದ 24 ರ ನಡುವೆ 152, ಟಿಪಿಆರ್. 24 ಮತ್ತು ಅದಕ್ಕಿಂತ ಹೆಚ್ಚಿನ 24 ಸ್ಥಳೀಯ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ಪ್ರದೇಶಗಳಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗುವುದು.
ತಿರುವನಂತಪುರದ ಮುದಕ್ಕಲ್,ಪಳ್ಳಿಚ್ಚಾಲ್, ಪತ್ತನಂತಿಟ್ಟದ ಕಡಪ್ರ, ಕೋಟ್ಟಯಂ ನ ವಾಳಪ್ಪಳ್ಳಿ, ಎರ್ನಾಕುಳಂ ನ ಕಿಳೀಟ್ಟಂ, ತೃಶೂರ್ ನ ವಲಪ್ಪಾಡ್, ಪಾಲಕ್ಕಾಡಿನ ಎಲವಂಜೇರಿ, ಎರಿಮಯೂರ್, ಕಣ್ಣಾಂಬ್ರ, ಕಿಳಿಕ್ಕಂಜೇರಿ, ಲೇಕ್ಕಿಟ್ಟಿ-ಪೇರೂರ್, ಮುತ್ತುತಲ, ಪಟ್ಟಾಂಬಿ, ತರೂರ್, ತೃತಲ, ವಡವನ್ನೂರ್, ಪರಾಳಿ, ವಿರಯೀರಿ, ಮಲಪ್ಪುರಂ ನ ಕೋಳಿಕ್ಕಾವ್, ಮಂಜೇರಿ, ಪೆರುಮಣ್ಣಕ್ಕೀರಿ, ವಳಿಕ್ಕಡವ್, ಕಾಸರಗೋಡು ಜಿಲ್ಲೆಯ ಅಜಾನೂರು, ಮಧೂರು ಗ್ರಾಮ ಪಂಚಾಯತಿಗಳು ಟಿಪಿಆರ್ ರೇಟ್ 24 ರಿಂದ ಮೇಲಿದೆ ಎಂದು ಸರ್ಕಾರ ತಿಳಿಸಿದೆ.





