ಕಾಸರಗೋಡು: ರಾಜ್ಯ ಸರಕಾರದ ಮೀನುಗಾರಿಕೆ ಮೀನುಕೃಷಿ ಅಭಿವೃದ್ಧಿ ಏಜೆನ್ಸಿ ಮೂಲಕ ಜಾರಿಗೊಳಿಸುವ ಜನಪರ ಮೀನುಕೃಷಿ 2021-22 ರ ವಿವಿಧ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ.
ವೈಜ್ಞಾನಿಮ ಸಮ್ಮಿಶ್ರ ಮೀನಿಕೃಷಿ, ಎಕ್ಸ್ ಟೆನ್ಸಿವ್ ಫಾಮಿಂಗ್ ಆಫ್ ಕಾರ್ಪ್ ಮೀನುಕೃಷಿ ಪ್ರೈವೇಟ್ ಪಾಂಡ್, ಎಕ್ಸ್ ಟೆನ್ಸೀವ್ ಫಾಮಿಂಗ್ ಆಫ್ ಬ್ರಾಕಿಷ್ ವಾಟರ್ ಫಿಷಸ್, ಹಿತ್ತಿಲ ಕೆರೆಗಳ ಮೀನುಕೃಷಿ, ಬಯಾಫ್ಲಾಕ್ಸ್ ಫಾಮಿಂಗ್, ರೀ ಸಕ್ರ್ಯು ಲೇಟರಿ ಅಕ್ವಾ ಕಲ್ಚರ್ ಸಿಸ್ಟಂ, ಶುದ್ಧಜಲ ಗುಂಪು ಕೃಷಿ, ಒಂದೇ ನೀರಿನ ಮೀನುಕೃಷಿ, ಕರಿಮೀನು ಬೀಜೋತ್ಪಾದನೆ ಇತ್ಯಾದಿ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ.
ಆಸಕ್ತರು ಜೂ.30ರ ಮುಮಚಿತವಾಗಿ ಕಾಞಂಗಾಡು ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಅವರ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರಂ ಮತ್ತು ಹೆಚ್ಚುವರಿಮಾಹಿತಿಗಳಿಗಾಗಿ ಕಾಞಂಗಾಡು ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಅವರ ಕಾರ್ಯಾಲಯದ ಮೀನುಕೃಷಿ ಅಭಿವೃದ್ಧಿ ಏಜೆನ್ಸಿ ಕಚೇರಿಯನ್ನು (ದೂರವಾಣಿ ಸಂಖ್ಯೆ: 8547609501) ಸಂಪರ್ಕಿಸಬಹುದು.


