ಕಾಸರಗೋಡು: ದೇಲಂಪಾಡಿ 33 ಕೆ.ವಿ.ಸಬ್ ಸ್ಟೇಷನ್ ನಿರ್ಮಾಣ ತ್ವರಿತರಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಭರವಸೆ ನೀಡಿದರು.
ದೇಲಂಪಾಡಿ ಗ್ರಾಮ ಪಂಚಾಯತ್ ನ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಸೇರಲಾದ ಸಿಬ್ಬಂದಿ, ಜನಪ್ರತಿನಿಧಿಗಳ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.
33 ಕೆ.ವಿ. ಸಬ್ ಸಟೇಷನ್ ಗೆ ಮಂಜೂರಾತಿ ನೀಡಿ, ಬಜೆಟ್ ನಲ್ಲಿ ನಿಧಿ ಮೀಸಲಿರಿಸಿದ್ದರೂ, ಸೂಕ್ತ ಜಾಗದ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಸ್ಟೇಷನ್ ನಿರ್ಮಾಣ ವಿಳಂಬಗೊಳ್ಳುತ್ತಿದೆ. ಸದ್ರಿ ಮುಳ್ಳೇರಿಯ 110 ಕೆ.ವಿ.ಸಬ್ ಸ್ಟೇಷನ್ ನಿಂದ ಅಡೂರಿಗೆ, ದೇಲಂಪಾಡಿಗೆ ವಿದ್ಯುತ್ ಸರಬರಾಜಾಗುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಕಡಿಯುವುದು ಸಾಮಾನ್ಯವಾಗಿದೆ. 27 ಕಿಮೀ ಅರಣ್ಯದಲ್ಲಿ ಲೈನ್ ಹಾದುಹೋಗುತ್ತಿದೆ. ಇದರಿಂದ ಕೆಡುಕು ಪತ್ತೆ ಮಾಡಿ ದುರಸ್ತಿ ನಡೆಸಲು ವಿಳಂಬವಾಗುತ್ತಿದೆ ಎಂದು ಸಬೆಯಲ್ಲಿ ಸೇರಿದ ಮಂದಿ ಅಭಿಪ್ರಾಯಪಟ್ಟರು.
ವಿದ್ಯುತ್ ಇಲಾಖೆ ಸಿಬ್ಬಂದಿ ಒಪ್ಪುವ ಜಾಗವನ್ನು ಪತ್ತೆ ಮಾಡಿ ಒದಗಿಸುವ ಬಗ್ಗೆ ಸಭೆ ತೀರ್ಮಾನ ಕೈಗೊಂಡಿದೆ.


