HEALTH TIPS

ವಿಶ್ವ ಸಿಂಹ ದಿನ 2021: ಸಿಂಹದ ಕುರಿತ ಆಸಕ್ತಿಕರ ಸಂಗತಿಗಳು

            ವಿಶ್ವ ಸಿಂಹ ದಿನವನ್ನು ಆಗಸ್ಟ್‌ 10ರಂದು ಆಚರಿಸಲಾಗುತ್ತದೆ(ಇಂದು). ಕುಸಿಯುತ್ತಿರುವ ಸಿಂಹಗಳ ಸಂಖ್ಯೆಗಳ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.

             ಅರಣ್ಯ ನಾಶ, ಕಾಡು ಪ್ರಾಣಿಗಳ ಬೇಟೆ ಈ ಎಲ್ಲಾ ಕಾರಣಗಳಿಂದಾಗಿ ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿವೆ. ಪ್ರಕೃತ್ತಿಯ ಆಹಾರ ಜಾಲದ ಪ್ರಕಾರ ಸಿಂಹಗಳ ಸಂಖ್ಯೆ ಕಡಿಮೆಯಾದರೂ ಕಾಡಿನಲ್ಲಿನ ಸಮತೋಲನ ತಪ್ಪುವುದು. ಸಿಂಹಗಳನ್ನು ರಕ್ಷಣೆ ಮಾಡಿ ಅವುಗಳ ಸಂಖ್ಯೆ ವೃದ್ಧಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ.



                                 ಭಾರತದಲ್ಲಿ ಸಿಂಹದ ಸಂಖ್ಯೆ

              ಭಾರತದಲ್ಲಿ 2015ರ ಗಣತಿಯ ಪ್ರಕಾರ 523 ಸಿಂಹಗಳಿದ್ದೆವು, 2020ರ ಜನಗಣತಿಯ ಪ್ರಕಾರ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು ಆ ಸಂಖ್ಯೆ 674ಕ್ಕೆ ಏರಿದೆ. ಇನ್ನು 5 ವರ್ಷಗಳಲ್ಲಿ ಸಿಂಹಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಏಷ್ಯಾಟಿಕ್‌ ಸಿಂಹಗಳು ನಿರ್ಬಂಧಿತ ಗಿರ್‌ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡು ಬರುವುದು.

                     ನಾವಿಲ್ಲಿ ಸಿಂಹದ ಕುರಿತ ಕೆಲ ಆಸಕ್ತಿಕರ ಸಂಗತಿಗಳನ್ನು ಹೇಳಿದ್ದೇವೆ ನೋಡಿ:

* ಭಾರತದಲ್ಲಿ ಗುಜರಾತ್‌ನ ಗಿರ್‌ ಅರಣ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
* ಸಿಂಹಗಳು ದಟ್ಟವಾದ ಅರಣ್ಯದಲ್ಲಿ ಇರುವುದಿಲ್ಲ ಬದಲಿಗೆ ಕಲ್ಲು ಬಂಡೆಗಳು, ಕುರುಚಲು ಗಿಡಗಳ ಕಾಡಿನಲ್ಲಿ ವಾಸಿಸುತ್ತವೆ.
* ಸಿಂಹಗಳು ಒಂಟಿಯಾಗಿರುತ್ತವೆ, ಸಂತಾನೋತ್ಪತ್ತಿ ಸಂದರ್ಭದಲ್ಲಿ ಮಾತ್ರ ಜತೆಯಾಗಿರುತ್ತವೆ.
* ಸಿಂಹ ತಾನಿರುವ ಪ್ರದೇಶಕ್ಕೆ ಒಂದು ಬೌಂಡರಿ ಹಾಕಿರುತ್ತದೆ, ಅದರ ಒಳಗಡೆ ಬೇರೆ ಸಿಂಹಗಳಿಗೆ ಪ್ರವೇಶವಿಲ್ಲ. ಸಿಂಹ ತಾನು ವಾಸಿಸುತ್ತಿರುವ ಪ್ರದೇಶದ ಸುತ್ತ ಮೂತ್ರ ಮಾಡಿ ಒಂದು ಬೌಂಡರಿ ಹಾಕಿರುತ್ತದೆ. ಆ ಮೂತ್ರ ವಾಸನೆ ಬೇರೆ ಸಿಂಹಕ್ಕೆ ಇಲ್ಲಿ ಬೇರೆ ಸಿಂಹವಿದೆ ಎಂಬ ಸುಳಿವು ನೀಡುವುದು. ಒಂದು ವೇಳೆ ಆ ಸುಳಿವು ಮೀರಿ ಆ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದರೆ ಎರಡು ಸಿಂಹಗಳ ನಡುವೆ ತೀವ್ರವಾದ ಕಾದಾಟವೇ ನಡೆಯುತ್ತದೆ.

                  ಸಿಂಹದ ಕುರಿತ ಆಸಕ್ತಿಕರ ಸಂಗತಿಗಳು

* ಕಣ್ಣಿಗೆ ಬಿದ್ದ ಪ್ರಾಣಿಗಳನ್ನು ಸುಮ್ಮನೆ ಬೇಟೆಯಾಡಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ. ಇನ್ನು ಗಂಡು ಸಿಂಹಕ್ಕಿಂತ ಹೆಣ್ಣು ಸಿಂಹವೇ ಬೇಟೆಯಾಡುತ್ತವೆ, ಹೆಣ್ಣು ಸಿಂಹ ಬೇಟೆಯಾಡಿದ್ದನ್ನು ತಿಂದು ಗಂಡು ಸಿಂಹ ಹಾಯಾಗಿರುತ್ತದೆ.
* ಈ ಗತ್ತಿನ ಪ್ರಾಣಿ ಸೋಮಾರಿ ಕೂಡ ಹೌದು. ದಿನದಲ್ಲಿ 16 ತಾಸು ನಿದ್ದೆಯಲ್ಲೇ ಕಳೆಯುವುದು.
* ಸಿಂಹಿಣಿ ಗರ್ಭಧರಿಸಿದ ಮೂರು ತಿಂಗಳಿಗೆ ಮಕ್ಕಳಿಗೆ ಜನ್ಮ ನೀಡುವುದು. ಒಂದು ಸಿಂಹದ ಜೀವಿತಾವಧಿ 15-16 ವರ್ಷವಷ್ಟೇ. 14 ವರ್ಷವಾಗುವಾಗಲೇ ಅದರ ಹಲ್ಲುಗಳು ಉದುರಲಾರಂಭಿಸುವುದು.
* ಸಿಂಹ 250 ಕೆಜಿಯಷ್ಟು ತೂಕ ಹೊಂದಿರುತ್ತದೆ, 8 ಅಡಿ ಉದ್ದವಿರುತ್ತದೆ.
* ಸಿಂಹಿಣಿಗಿಂತ ಸಿಂಹ ನೋಡಲು ಭಿನ್ನವಾಗಿರುತ್ತದೆ. ಭುಜದವರೆಗಿನ ಉದ್ದುದ್ದ ರೋಮಗಳನ್ನು ಹೊಂದಿರುತ್ತದೆ.
* ಸಿಂಹಿಣಿ ಸಿಂಹಕ್ಕಿಂತ ಚಿಕ್ಕದಿರುತ್ತದೆ ಹಾಗೂ ಚುರುಕಾಗಿರುತ್ತದೆ. ಸಿಂಹಿಣಿ ಇತರ ಸಿಂಹಿಣಿಗಳ ಜೊತೆ ಇರುತ್ತದೆ.

             ಸಿಂಹದ ಕುರಿತ ಆಸಕ್ತಿಕರ ಸಂಗತಿಗಳು

* ಸಿಂಹದ ಘರ್ಜನೆ 7 ಮೈಲಿ ದೂರಕ್ಕೆ ಕೇಳುವುದು.
* ಸಿಂಹಗಳು ರಾತ್ರಿ ಹೊತ್ತಿನಲ್ಲಿ ಬೇಟೆಯಾಡುತ್ತವೆ
* ಕಾಡಿನಲ್ಲಿರುವ ಸಿಂಹಕ್ಕಿಂತ ಮೃಗಾಲಯದಲ್ಲಿರುವ ಸಿಂಹಗಳು ಹೆಚ್ಚು ವರ್ಷ ಬದುಕಿರುತ್ತವೆ.
* ಒಂದು ವರದಿಯ ಪ್ರಕಾರ ಶತಮಾನಗಳ ಹಿಂದೆ ಆಫ್ರಿಕದಲ್ಲಿಯೇ 2 ಲಕ್ಷ ಸಿಂಹಗಳಿದ್ದೆವು. ಈಗ ಅದರ ಸಂಖ್ಯೆ 30 -20 ಸಾವಿರಕ್ಕೆ ಕುಸಿದಿದೆ.
* ಸಿಂಹಗಳ ಆವಾಸ ಸ್ಥಾನಕ್ಕೆ ತೊಂದರೆಯಾದರೆ ಸಿಂಹಗಳ ಸಂಖ್ಯೆ ಕೂಡ ಕಡಿಮೆಯಾಗುವುದು.
* ಆದ್ದರಿಂದ ಸಿಂಹಗಳ ರಕ್ಷಣೆಗಾಗಿ ಅವುಗಳ ಆವಾಸ ಸ್ಥಾನದ ಸ್ಥಳಗಳನ್ನು ಗುರುತಿಸಿ ಅರಣ್ಯ ಸಂರಕ್ಷಣಾ ವಲಯ ಎಂಬುವುದಾಗಿ ಗುರುತಿಸಿ ಸಂರಕ್ಷಣೆ ಮಾಡಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries