ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೆ.18ರಂದು 49 ಆರೋಗ್ಯ ಸಂಸ್ಥೆಗಳಲ್ಲಿ ಮತ್ತು 2 ಆರೋಗ್ಯ ಕೇಂದ್ರಗಳಲ್ಲಿ ವಾಕ್ಸಿನೇಷನ್ ನಡೆಯಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು. ವೆಬ್ ಸೈಟ್ ಮೂಲಕ, ಆನ್ ಲೈನ್ ಮೂಲP,À ಮತ್ತು ಸ್ಪಾಟ್ ನೋಂದಣಿ ಮೂಲಕ ಲಸಿಕೆ ನೀಡಿಕೆ ಜರುಗಲಿದೆ. ಸ್ಪಾಟ್ ನೋಂದಣಿ ಅಗತ್ಯವಿರುವವರು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬೇಕು. ಮೊದಲ ಡೋಸ್ ಸ್ವೀಕರಿಸಬೇಕಾದವರು ಮತ್ತು ದ್ವಿತೀಯ ಡೋಸ್ ಗೆ ಅವಧಿ ಪೂರ್ಣಗೊಂಡವರೂ ಲಸಿಕೆ ಪಡೆಯಬೇಕು. ಹೆಚ್ಚಿನ ಮಾಹಿತಿಗೆ : 9061076590 ಸಂಪರ್ಕಿಸಬಹುದು.





