ಕಾಸರಗೋಡು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಒಕ್ಕೂಟ ವತಿಯಿಂದ ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು 'ಮಾನವ ಗೋಡೆ'ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಖ್ಯಾತ ಸಾಮಾಜಿಕ-ಪರಿಸರ ಹೋರಾಟಗಾರ್ತಿ ದಯಾಭಾಯಿ ಧರಣಿ ಉದ್ಘಾಟಿಸಿ ಮಾತನಾಡಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರನ್ನು ಮೂರನೇ ದರ್ಜೆ ನಾಗರಿಕರಂತೆ ಪರಿಗಣಿಸುವುದನ್ನು ಸರ್ಕಾರ ನಿಲ್ಲಿಸಿ, ಅವರಿಗೆ ನ್ಯೋಯೋಚಿತವಾಗಿ ಲಭಿಸಬೇಕಾದ ಸವಲತ್ತು ಒದಗಿಸಿಕೊಡುವಂತೆ ಆಗ್ರಹಿಸಿದರು. ಮುನೀಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ರಹಮಾನ್, ಮಧುರಾಜ್, ಸಿಸ್ಟರ್ ಜಯ, ಅಬ್ದುಲ್ ಖಾದರ್ ಚಟ್ಟಂಚಾಲ್, ಗೋವಿಂದನ್ ಕಯ್ಯೂರ್, ಕೃಷ್ಣಕುಮಾರ್, ತಾಜುದ್ದೀನ್ ಪಡಿಞËರ್ ಉಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು.




