HEALTH TIPS

ದೇಶವಿರೋಧಿ, ಪ್ರಚೋದನಾತ್ಮಕ ಹೇಳಿಕೆ ನೀಡುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ: ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳ

             ತಿರುವನಂತಪುರಂ: ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳದ ಕುಲಸಚಿವರು ಆಗಸ್ಟ್ 30ರಂದು ಹೊರಡಿಸಿರುವ ಸುತ್ತೋಲೆಯೊಂದರಲ್ಲಿ "ಸಂಸ್ಥೆಯ ಬೋಧಕರು ಹಾಗೂ ಉದ್ಯೋಗಿಗಳು ದೇಶ-ವಿರೋಧಿ ಎಂದು ತಿಳಿಯಬಹುದಾದ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ರೀತಿಯ ಪ್ರಚೋದನಾತ್ಮಕ ಭಾಷಣಗಳು/ಹೇಳಿಕೆಗಳನ್ನು ನೀಡಬಾರದು. ಹಾಗೇನಾದರೂ ಮಾಡಿದವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಲಾಗಿದೆ.

             ವಿವಿಯ ಉಪಕುಲಪತಿಗಳ ಅನುಮತಿಯೊಂದಿಗೆ ಈ ಸುತ್ತೋಲೆ ಹೊರಡಿಸಲಾಗಿದೆ ಎಂದೂ ಅದರಲ್ಲಿ ತಿಳಿಸಲಾಗಿದೆ.

             ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ನೀತಿಗಳ ಟೀಕಾಕಾರರಾಗಿರುವವರ ಬಾಯ್ಮುಚ್ಚಿಸುವ ತಂತ್ರಗಾರಿಕೆ ಇದಾಗಿದೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ವಿವಿಯ ಹಲವು ಉಪನ್ಯಾಸಕರು ಹೇಳಿದ್ದಾರೆ.

           ಆರೆಸ್ಸೆಸ್ ಅನ್ನು 'ಪ್ರೊಟೊ-ಫ್ಯಾಸಿಸ್ಟ್ ಸಂಘಟನೆ' ಎಂದು ಹೇಳಿದ ಪ್ರೊಫೆಸರ್ ಒಬ್ಬರನ್ನು ಅಮಾನತು ಮಾಡಿದ ಮೂರು ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries