ತಿರುವನಂತಪುರಂ: ರಾಜ್ಯ ಸರ್ಕಾರದ ಸಚಿವರುಗಳಿಗೆ ಐ.ಪಿ. ಎಂ ಜಿ ನೇತೃತ್ವದ ತರಬೇತಿ ಕಾರ್ಯಕ್ರಮ ಸೆ.20 ರಂದು ಆರಂಭವಾಗಲಿದೆ. ಮೂರು ದಿನಗಳ ತರಬೇತಿಯು ಹತ್ತು ಅವಧಿಗಳನ್ನು ಒಳಗೊಂಡಿದೆ. ತರಬೇತಿ ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ಸಚಿವರ ಬಗ್ಗೆ ಪ್ರಕಟಗೊಳ್ಳುವ ವಿವಾದ ಸುದ್ದಿಗಳ ನಿರ್ವಹಣೆ ಸಹಿತ ಸಮಗ್ರ ವಿಷಯಗಳು ಇರಲಿವೆ. ಮೊದಲ ದಿನ ಆಡಳಿತದ ಬಗ್ಗೆ ಇನ್ನಷ್ಟು ಕಲಿಯುವ, ವಿಪತ್ತು ಸಮಯದಲ್ಲಿ ನಾಯಕತ್ವ ಎದುರಿಸುತ್ತಿರುವ ಸವಾಲುಗಳು ಮತ್ತು ಸಚಿವರಾಗಿ ತಂಡದ ನಾಯಕನ ಕುರಿತು ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ. ಎಂ ಚಂದ್ರಶೇಖರ್ ಆಡಳಿತ ವಿಷಯಗಳನ್ನು ಮೊದಲ ದಿನ ವಿವರಿಸಲಿದ್ದಾರೆ.
ವಿಪತ್ತು ನಿರ್ವಹಣೆಯ ಸವಾಲುಗಳ ಕುರಿತು ಯು.ಎಸ್ ಎನ್ ವಿಪತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ. ಮುರಳಿ ತುಮ್ಮಾರಕುಡಿ ಸಂವಹನ ನಡೆಸಲಿದ್ದಾರೆ. ಬಳಿಕ, ತಂಡವನ್ನು ಮುನ್ನಡೆಸುವ ಬಗ್ಗೆ. .ಐ.ಐ.ಎಮ್ ಮಾಜಿ ಪ್ರಾಧ್ಯಾಪಕ ಮತ್ತು ವ್ಯವಸ್ಥಾಪಕ ಸಂವಹನ ಸಲಹೆಗಾರ ಪ್ರೊ. ಮ್ಯಾಧ್ಯುಕುಟ್ಟಿ ಎಂ. ಮೊನಿಪಳ್ಳಿ ಮಾತನಾಡಲಿದ್ದಾರೆ.
21 ರಂದು ಬೆಳಿಗ್ಗೆ ಮೊದಲ ಅಧಿವೇಶನದಲ್ಲಿ, ನ್ಯಾಯ ಆಯೋಗ ಸಿ. ಇ. ಓ ಅಮಿತಾಬ್ ಕಾಂತ್ ಮಾತನಾಡಲಿದ್ದಾರೆ. ಆ ಬಳಿಕ, ಇನ್ಫೋಸಿಸ್ ಸಹ ಸಂಸ್ಥಾಪಕ ಎಸ್. ಡಿ ಶಿಬುಲಾಲ್ ಆನ್‍ಲೈನ್‍ನಲ್ಲಿ ಸಂವಹನ ನಡೆಸುತ್ತಾರೆ. ವಿಶ್ವಬ್ಯಾಂಕ್ ಮುಖ್ಯ ಮೌಲ್ಯಮಾಪಕ ಮತ್ತು ರಾಜ್ಯ ಸರ್ಕಾರದ ಮಾಜಿ ಲಿಂಗ ಸಲಹೆಗಾರೆ ಗೀತಗೋಪಾಲ್ ಅವರು ವಿವಿಧ ಏಜೆನ್ಸಿಗಳ ಆರ್ಥಿಕ ಸಹಾಯ, ವಿಶ್ವ ಬ್ಯಾಂಕ್ ನಿಧಿಗಳ ಬಗ್ಗೆ ಮಾತನಾಡಲಿದ್ದಾರೆ.
ಮಂತ್ರಿಗಳು ಮತ್ತು ಅಧಿಕಾರಿಗಳ ನಡುವಿನ ಸಂಬಂಧದ ಬಗ್ಗೆ ಐ. ಎಂ ಜಿ ನಿರ್ದೇಶಕ ಕೆ. ಜಯಕುಮಾರ್ ವಿವರಿಸುತ್ತಾರೆ. ಕೇರಳ ಡಿಜಿಟಲ್ ವಿಜ್ಞಾನ, ನಾವೀನ್ಯತೆ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಜಿ ಗೋಪಿನಾಥ್ ಮಾತನಾಡಲಿದ್ದಾರೆ.
ಮಾಜಿ ಯೂನಿಯನ್ ಕಾರ್ಯದರ್ಶಿ ಅನಿಲ್ ಸ್ವರೂಪ್ ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರೇರಣೆಯ ಮಹತ್ವದ ಬಗ್ಗೆ ಮಾತನಾಡುತ್ತಾರೆ. ತರಬೇತಿ ಕಾರ್ಯಕ್ರಮವು ಸಿಟಿಜನ್ ಡಿಜಿಟಲ್ ಫೌಂಡೇಶನ್‍ನ ಸಂಸ್ಥಾಪಕÀ ನಿಧಿಸೂದನ್ ಮತ್ತು ವಿಜೇಶ್ ರಾಮ್ ಪ್ರಸ್ತುತಪಡಿಸಿದ ಸಾಮಾಜಿಕ ಮಾಧ್ಯಮಗಳಲ್ಲಿ ಅಡಗಿರುವ ಅಪಾಯಗಳು ಮತ್ತು ಹೊಸ ಸಾಧ್ಯತೆಗಳ ಕುರಿತು ಒಂದು ಸೆಷನ್‍ನೊಂದಿಗೆ ಮುಕ್ತಾಯಗೊಳ್ಳುತ್ತದೆ.


