ಮಂಜೇಶ್ವರ: ಕೋವಿಡ್ ನ ನಿಯಂತ್ರಣ ಕ್ಕೆ ಜನತೆಯ ಸಹಕಾರ ಹಾಗೂ ಮುಂಜಾಗ್ರತೆ ಅಗತ್ಯ ಎಂದು ಸಹಾಯಕ ಆರೋಗ್ಯ ಅಧಿಕಾರಿ ಡಾ. ವಿನೋದ್ ಕುಮಾರ್ ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹಮ್ಮಿಕೊಂಡ ಕೋವಿಡ್ ನಿಯಂತ್ರಣ ತರಬೇತಿ ಶಿಬಿರದಲ್ಲಿ ತರಗತಿ ನಡೆಸಿ ಅವರು ಮಾಹಿತಿ ನೀಡಿದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ.ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖಂಡರಾದ ವಿಜಯ್ ರೈ, ಅಶ್ವಿನಿ ಪಜ್ವ, ಆದರ್ಶ ಬಿಎಂ, ಪದ್ಮನಾಭ ಕಡಪ್ಪರ, ವಸಂತ್ ಮಯ್ಯ, ರಾಜೇಶ್ ತೂಮಿನಾಡ್, ಕೃಷ್ಣ ಜೆಜ್ಜ, ಚಂದ್ರಹಾಸ ಕಡಂಬಾರ್, ರಾಜಕುಮಾರ್ ವರ್ಕಾಡಿ ಉಪಸ್ಥಿತರಿದ್ದರು. ಬಾಬು ಮಾಸ್ತರ್ ಸ್ವಾಗತಿಸಿ, ಸಂತೋಷ್ ದೈಗೊಳಿ ವಂದಿಸಿದರು.





