HEALTH TIPS

ಗೂಗಲ್‌ ಮ್ಯಾಪ್‌ನಲ್ಲಿ ಈಗ ಕೋವಿಡ್‌ ಲಸಿಕೆ ಲಭ್ಯತೆಯ ಮಾಹಿತಿ ತಿಳಿಯಬಹುದು

             ಜನಪ್ರಿಯ ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ಟ್ರಾವಲಿಂಗ್ ಗೈಡ್ ಇದ್ದಂತೆ ಆಗಿದೆ. ಇತ್ತೀಚಿಗೆ ಗೂಗಲ್‌ ಮ್ಯಾಪ್‌ನಲ್ಲಿ ಸಾಕಷ್ಟು ಅಪ್‌ಡೇಟ್ ಕಂಡಿದ್ದು, ಬಳಕೆದಾರರಿಗೆ ಅನುಕೂಲಕರವಾಗಲೆಂದು ಹಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಗೂಗಲ್ ಮ್ಯಾಪ್ ಈಗ ಹೊಸದೊಂದು ಗ್ರಾಹಕ ಸ್ನೇಹಿ ಸೇವೆಗೆ ಶುರು ಮಾಡಿದೆ. ಅದುವೇ ಕೋವಿಡ್‌ 19 ಲಸಿಕೆ ಸಂಬಂಧಿತ ಮಾಹಿತಿಯನ್ನು ಬಳಕೆದಾರರು ಪರಿಶೀಲಿಸುವ ಸಾಮರ್ಥ್ಯವನ್ನು ಗೂಗಲ್ ಘೋಷಿಸಿದೆ. ಗೂಗಲ್ ಮ್ಯಾಪ್ಸ್, ಸರ್ಚ್ ಮತ್ತು ಅಸಿಸ್ಟೆಂಟ್ ಬಳಕೆದಾರರು ಭಾರತದಲ್ಲಿ ಲಸಿಕೆ ಲಭ್ಯತೆ ಮತ್ತು ಅಪಾಯಿಂಟ್‌ಮೆಂಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೋರಿಸಬಹುದು ಎಂದು ಗೂಗಲ್ ತಿಳಿಸಿದೆ.

           ಕೋವಿನ್ ಎಪಿಐಗಳಿಂದ ರಿಯಲ್‌ ಟೈಮ್‌ ಡೇಟಾದಿಂದ ನಡೆಸಲ್ಪಡುವ ಲಸಿಕೆ ಲಭ್ಯತೆ ಸಂಬಂಧಿತ ಮಾಹಿತಿಯನ್ನು 13,000 ಕ್ಕೂ ಹೆಚ್ಚಿನ ಕೇಂದ್ರಗಳನ್ನು ತೋರಿಸುತ್ತವೆ ಎಂದು ತಿಳಿದು ಬಂದಿದೆ. ಇತ್ತೀಚಿನ ಅಪ್‌ಡೇಟ್‌ ಈ ವಾರದೊಳಗೆ ಹೊರತರಲಾಗುವುದು ಎನ್ನಲಾಗಿದೆ. ಆದ್ದರಿಂದ, ನೀವು ಇನ್ನೂ ಹೊಸ ಫೀಚರ್ಸ್‌ಗಳನ್ನು ಸ್ವೀಕರಿಸದಿದ್ದರೆ, ಅದಕ್ಕಾಗಿ ಕಾಯಿರಿ.

               ಬರೀ ಸರ್ಚ್ ಮಾಡುವುದರಿಂದ ಬಳಕೆದಾರರು ಈಗ ಕೋವಿಡ್ -19 ಲಸಿಕೆಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಕಂಡುಕೊಳ್ಳಬಹುದು ಎಂದು ಗೂಗಲ್ ಘೋಷಿಸಿದೆ. ಈ ಕೆಲವು ಮಾಹಿತಿಯು ಪ್ರತಿ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳ ಲಭ್ಯತೆ, ನೀಡಲಾದ ಡೋಸ್‌ಗಳು (ಡೋಸ್ 1 ಅಥವಾ ಡೋಸ್ 2), ಬೆಲೆ ಮತ್ತು ಬುಕಿಂಗ್‌ಗಾಗಿ CoWIN ವೆಬ್‌ಸೈಟ್‌ಗೆ ಲಿಂಕ್‌ಗಳನ್ನು ಒಳಗೊಂಡಿದೆ.

ಗೂಗಲ್ ಸರ್ಚ್ ಮತ್ತು ಮ್ಯಾಪ್‌ಗಳಲ್ಲಿ ಕೋವಿಡ್ -19 ಲಸಿಕೆ ಮಾಹಿತಿ ಪಡೆಯಲು ಹೀಗೆ ಮಾಡಿ:

ಅಧಿಕೃತ ಬ್ಲಾಗ್‌ಪೋಸ್ಟ್‌ನಲ್ಲಿ, ಬಳಕೆದಾರರು ತಮ್ಮ ಬಳಿ ಅಥವಾ ಗೂಗಲ್ ಸರ್ಚ್, ಮ್ಯಾಪ್ಸ್ ಮತ್ತು ಗೂಗಲ್ ಅಸಿಸ್ಟೆಂಟ್‌ನಲ್ಲಿ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಲಸಿಕೆ ಕೇಂದ್ರಗಳನ್ನು ಸರ್ಚ್ ಮಾಡಿದಾಗ ಲಸಿಕೆ ಲಭ್ಯತೆಗೆ ಸಂಬಂಧಿತ ಮಾಹಿತಿಯು ತೋರಿಸುತ್ತದೆ ಎಂದು ಗೂಗಲ್ ಹೇಳಿದೆ. ಕೋವಿಡ್-19 ಲಸಿಕೆ ಸಂಬಂಧಿತ ಮಾಹಿತಿಗಾಗಿ ಸರ್ಚ್ ಮಾಡಲು, ಬಳಕೆದಾರರು ಗೂಗಲ್ ಸರ್ಚ್, ಗೂಗಲ್ ಮ್ಯಾಪ್‌ ಅಥವಾ ಗೂಗಲ್‌ ಅಸಿಸ್ಟಂಟ್‌ನಲ್ಲಿ covid-19 vaccines near me ಎಂದು ಟೈಪ್ ಮಾಡಬೇಕಾಗುತ್ತದೆ.

           ಲಸಿಕೆ ಸಂಬಂಧಿತ ಮಾಹಿತಿಯನ್ನು ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ ಮತ್ತು ಮರಾಠಿ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲಿ ತೋರಿಸಲಾಗುತ್ತದೆ ಎಂದು ಸರ್ಚ್ ದೈತ್ಯ ಹೇಳಿದೆ. ಭಾರತದಾದ್ಯಂತ ಎಲ್ಲಾ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಈ ಕಾರ್ಯವನ್ನು ವಿಸ್ತರಿಸಲು CoWIN ತಂಡದೊಂದಿಗೆ ನಿಕಟ ಪಾಲುದಾರಿಕೆಯನ್ನು ನೀಡುವುದಾಗಿ ಗೂಗಲ್ ಭರವಸೆ ನೀಡಿದೆ.

         ಜನರು ತಮ್ಮ ಜೀವನವನ್ನು ನಿರ್ವಹಿಸಲು ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರ್ಚ್‌ ಮಾಡುತ್ತಲೇ ಇರುವುದರಿಂದ, ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಧಿಕೃತ ಮತ್ತು ಸಕಾಲಿಕ ಮಾಹಿತಿಯನ್ನು ಸರ್ಚ್ ಮಾಡಲು ಮತ್ತು ಹಂಚಿಕೊಳ್ಳಲು ನಾವು ಬದ್ಧರಾಗಿರುತ್ತೇವೆ ಎಂದು ಗೂಗಲ್ ಸರ್ಚ್‌ನ ನಿರ್ದೇಶಕಿ ಹೇಮಾ ಬುಡರಾಜು ಹೇಳಿದರು.

        ಇತ್ತೀಚಿನ ಫೀಚರ್ಸ್‌ಗಳನ್ನು ಬಳಕೆ ಮಾಡವ, ಮೊದಲು ಗೂಗಲ್‌ನ ಆಯಾ ಆಪ್‌ಗಳನ್ನು ಅಪ್‌ಡೇಟ್ ಮಾಡಲು ಸೂಚಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೇ, ಬಳಕೆದಾರರು ಈ ಹೊಸ ಫೀಚರ್ಸ್‌ಗಳನ್ನು ಇನ್ನೂ ಸ್ವೀಕರಿಸದಿದ್ದರೆ, ಈ ವಾರದ ಅಂತ್ಯದವರೆಗೆ ಅವರು ಕಾಯಬೇಕಾಗಬಹುದು ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries