HEALTH TIPS

BREAKING: ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಕೋರ್ಸ್‌ ಜಾರಿಗೆ ಅಧಿಸೂಚನೆ

              ನವದೆಹಲಿ: ನಾಲ್ಕು ವರ್ಷಗಳ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ (ಐಟಿಇಪಿ) ಜಾರಿಗೆ ಶಿಕ್ಷಣ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ.

          ಇದು ಬಿಎ-ಬಿಇಡಿ, ಬಿಎಸ್ಸಿ-ಬಿಇಡಿ ಮತ್ತು ಬಿಕಾಂ-ಬಿಇಡಿ ರೀತಿಯ ಕೋರ್ಸುಗಳನ್ನು ಒಟ್ಟಿಗೆ ನೀಡುವ ಪದವಿಯಾಗಿದೆ.

           2022-23ರ ಶೈಕ್ಷಣಿಕ ಅವಧಿಯಿಂದ ಪ್ರಾಯೋಗಿಕ ಕ್ರಮದಲ್ಲಿ ಈ ಪದವಿ ಕೋರ್ಸ್‌ ಅನ್ನು ದೇಶದಾದ್ಯಂತ 50 ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸಲಾಗುತ್ತದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ, 2030 ರಿಂದ ಶಿಕ್ಷಕರ ನೇಮಕವು ಐಟಿಇಪಿ ಮೂಲಕ ಮಾತ್ರ ಇರುತ್ತದೆ.

            'ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಂಡಳಿಯು ಈ ಕೋರ್ಸ್‌ನ ಪಠ್ಯಕ್ರಮವನ್ನು ರೂಪಿಸಿದೆ. ಅದು ವಿದ್ಯಾರ್ಥಿ-ಶಿಕ್ಷಕರಿಗೆ ಶಿಕ್ಷಣದಲ್ಲಿ ಪದವಿಯನ್ನು ಪಡೆಯಲು ಮತ್ತು ಇತಿಹಾಸ, ಗಣಿತ, ವಿಜ್ಞಾನ, ಕಲೆ, ಅರ್ಥಶಾಸ್ತ್ರ, ವಾಣಿಜ್ಯದಂತಹ ವಿಶೇಷ ವಿಷಯಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ' ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

             ಐಟಿಇಪಿ ಪದವಿಯ ನಾಲ್ಕು ವರ್ಷಗಳ ಕೋರ್ಸ್‌ 2022-23ರ ಶೈಕ್ಷಣಿಕ ಅವಧಿಯಿಂದ ಆರಂಭವಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮೂಲಕ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ' ಎಂದು ಅಧಿಕಾರಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries