ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆಯನ್ನು ಪಡೆಯಲು ಅರ್ಹರಾದವರಲ್ಲಿ ಒಂದು ಡೋಸ್ ಪಡೆದವರಿಗಿಂತ ಎರಡು ಡೋಸ್‌ಗಳನ್ನು ಪಡೆದವರ ಸಂಖ್ಯೆ ಇದೇ ಮೊದಲ ಬಾರಿಗೆ ಅಧಿಕವಾಗಿರುವುದು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಬುಧವಾರ ಹೇಳಿದರು.
0
samarasasudhi
ನವೆಂಬರ್ 17, 2021
ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆಯನ್ನು ಪಡೆಯಲು ಅರ್ಹರಾದವರಲ್ಲಿ ಒಂದು ಡೋಸ್ ಪಡೆದವರಿಗಿಂತ ಎರಡು ಡೋಸ್‌ಗಳನ್ನು ಪಡೆದವರ ಸಂಖ್ಯೆ ಇದೇ ಮೊದಲ ಬಾರಿಗೆ ಅಧಿಕವಾಗಿರುವುದು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಬುಧವಾರ ಹೇಳಿದರು.
'ಜನರ ಪಾಲ್ಗೊಳ್ಳಿವಿಕೆ' ಎಂಬ ಧ್ಯೇಯದಿಂದ ಕೂಡಿದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಸರ್ಕಾರದಲ್ಲಿ ಜನರು ಹೊಂದಿರುವ ವಿಶ್ವಾಸ ಹಾಗೂ ಪ್ರಸಕ್ತ ನಡೆಯುತ್ತಿರುವ 'ಹರ್ ಘರ್ ದಸ್ತಕ್' ಅಭಿಯಾನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ' ಎಂದು ಅವರು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ 7ಕ್ಕೆ ಸಿದ್ಧಪಡಿಸಲಾದ ತಾತ್ಕಾಲಿಕ ವರದಿ ಪ್ರಕಾರ, ದೇಶದಲ್ಲಿ ಈ ವರೆಗೆ 113.68 ಕೋಟಿ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.