ಮಲಪ್ಪುರಂ: ತನ್ನ ಸಹೋದರನ ವಿರುದ್ಧ ಸುಳ್ಳು ಕಿರುಕುಳದ ದೂರು ದಾಖಲಿಸಿದ್ದ ಬಾಲಕಿಯ ವಿರುದ್ಧ ಪೊಲೀಸರು ಛೀಮಾರಿ ಹಾಕಿದ್ದಾರೆ. ಚಂಗರಂಕುಲಂ ಪೊಲೀಸ್ ಠಾಣೆ ವ್ಯಾಪ್ತಿಯ ಅಪ್ರಾಪ್ತ ಬಾಲಕಿ
ಹೀಗೊಂದು ಅಪ್ರಬುದ್ದತೆ ಮೆರೆದು ಕಳವಳ ಮೂಡಿಸಿದ್ದಾಳೆ. ಬಾಲಕಿ ಸುಳ್ಳು ಹೇಳಿರುವುದು ತನಿಖೆಯಿಂದ ತಿಳಿದುಬಂದಿದೆ. ಮಲಪ್ಪುರಂ ಎಡಪ್ಪಲ್ ನಲ್ಲಿ ಈ ಘಟನೆ ನಡೆದಿದೆ.
ಸೋಷಿಯಲ್ ಮೀಡಿಯಾ ಮೂಲಕ ಚಾಟಿಂಗ್ ಮತ್ತು ಸ್ನೇಹ ಬೆಳೆಸುವುದನ್ನು ಪ್ರಶ್ನಿಸಿದ್ದಕ್ಕಾಗಿ ಬಾಲಕಿ ತನ್ನ ಸಹೋದರನ ವಿರುದ್ಧ ಕಿರುಕುಳದ ದೂರು ನೀಡಿದ್ದಳು. ಸಹೋದರ ಹಲವು ಬಾರಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ದೂರು ದಾಖಲಾಗಿತ್ತು. ಬಾಲಕಿ ಚೈಲ್ಡ್ ಲೈನ್ ಮೂಲಕ ದೂರು ದಾಖಲಿಸಿದ್ದಳು.
ಅವರು ಪ್ರಕರಣವನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ತಿರೂರ್ ಡಿವೈಎಸ್ಪಿ ಅವರ ಸೂಚನೆ ಮೇರೆಗೆ ಚಂಗರಂಕುಲಂ ಸಿಐ ಬಶೀರ್ ಚಿರಕ್ಕಲ್ ತನಿಖೆ ಆರಂಭಿಸಿದರು. ಯುವಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

