ತಿರುವನಂತಪುರ: ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯಿರುವ ಭೂಮಿ ಮತ್ತು ಕಟ್ಟಡಗಳನ್ನು ಹಿಂಪಡೆಯಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ಈ ಕ್ರಮವು ಯಾತ್ರಿಕರು ಮತ್ತು ಪ್ರವಾಸಿಗರಿಂದ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ. ವಾರಣಾಸಿಯಲ್ಲಿ ದೇವಸ್ವಂ ಮಂಡಳಿಯು 300 ಎಕರೆ ಭೂಮಿ ಮತ್ತು 30 ಕೊಠಡಿಗಳ ಕಟ್ಟಡಗಳನ್ನು ಹೊಂದಿದೆ.
ಕಾಶಿ ವಿಶ್ವನಾಥ ದೇವಸ್ಥಾನ ಕಾರಿಡಾರ್ ಆಗಮನದೊಂದಿಗೆ ದೇವಸ್ವಂ ಮಂಡಳಿಯ ಈ ಕ್ರಮಕ್ಕೆ ಮುಂದಾಗಿದೆ. ಕಾರಿಡಾರ್ ನಿಂದಾಗಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಲಿದ್ದು, ಆದಾಯವೂ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಲಾಭಕ್ಕಾಗಿ ಭೂಮಿ ಮತ್ತು ಕಟ್ಟಡಗಳನ್ನು ಹಿಂಪಡೆಯಲಾಗುತ್ತಿದೆ. ಇದಕ್ಕಾಗಿ ವಿಶೇಷ ತಂಡವನ್ನು ವಾರಣಾಸಿಗೆ ಮಂಡಳಿ ಕಳುಹಿಸಲಿದೆ ಎಂದು ತಿಳಿದುಬಂದಿದೆ. ಯಾತ್ರಿಕರಿಗಾಗಿ ಕಟ್ಟಡಗಳನ್ನು ನವೀಕರಿಸುವ ಯೋಜನೆಯೂ ಇದೆ. ಮಂಡಳಿ ಅಂದಾಜು 1 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ.
ನಿಯಂತ್ರಣದಲ್ಲಿದ್ದರೂ ಕಟ್ಟಡಗಳು ಮತ್ತು ಭೂಮಿಯನ್ನು ಮಂಡಳಿಯು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಇದರ ಬೆನ್ನಲ್ಲೇ ಈ ಸ್ಥಳಗಳು ಕಾಡು-ಪೊದೆಗಳಿಂದಾವೃತ್ತವಾದವು. ಕಟ್ಟಡಗಳೂ ಶಿಥಿಲಾವಸ್ಥೆಯಲ್ಲಿವೆ. ಇದರಿಂದ ಹಲವರು ಇಲ್ಲಿಯ ಒಂದಷ್ಟು ಸ್ಥಳವನ್ನು ವಶಪಡಿಸಿದರೆಂದೂ ತಿಳಿದುಬಂದಿದೆ. ಕಟ್ಟಡಗಳಲ್ಲಿಯೂ ಅಕ್ರಮ ನಿವೇಶನಗಳಿವೆ. ವಾರಣಾಸಿಯು ಸುಮಾರು 2 ಕಿ.ಮೀ ದೂರದಲ್ಲಿ ಈ ನಿವೇಶನ. ಇದರಲ್ಲಿ 22 ಸೆಂಟ್ಸ್ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿ ಮಾತ್ರ ದಾಖಲೆಗಳಿವೆ.
ಈ ಸ್ಥಳವನ್ನು ತಿರುವಾಂಕೂರಿನ ರಾಜಮನೆತನ ಮತ್ತು ಗಣ್ಯರಿಗೆ ಕಾಶಿ ವಿಶ್ವನಾಥ ತೀರ್ಥಯಾತ್ರೆಗಾಗಿ ರಾಜ ಶ್ರೀ ಪದ್ಮನಾಭನ್ ಅವರು ನೀಡಿದ್ದರು. ರಾಜಪ್ರಭುತ್ವದ ಅಂತ್ಯದ ವೇಳೆಗೆ, ಇದೆಲ್ಲವೂ ದೇವಸ್ವಂ ಮಂಡಳಿಯ ಒಡೆತನದಲ್ಲಿದೆ.




