ತಿರುವನಂತಪುರ: ವರದಕ್ಷಿಣೆ ಪಿಡುಗಿನ ವಿರುದ್ದ ಮಹಿಳೆಯರು ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿವಾಹ ಸಮಾಲೋಚನೆಯ ಸಮಯದಲ್ಲಿ ಇಂತಹ ಕ್ರಿಯೆಗಳಿಗೆ ಪ್ರತಿಕ್ರಿಯಿಸಿ. ಈ ದೂರುಗಳಿಗೆ ಸರ್ಕಾರ ಜೊತೆಗಿದೆ ನ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕುಟುಂಬಶ್ರೀ ನೇತೃತ್ವದಲ್ಲಿ ವರದಕ್ಷಿಣೆ ಮತ್ತು ದೌರ್ಜನ್ಯ ವಿರೋಧಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರ ಕುಂದುಕೊರತೆಗಳ ಬಗ್ಗೆ ತನಿಖೆ ನಡೆಸಿ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿರುವುದು ಚರ್ಚೆಗೆ ಗ್ರಾಸವಾಗಿರುವಾಗಲೇ ಮುಖ್ಯಮಂತ್ರಿಗಳು ರು ನೀಡುವಂತೆ ಕರೆ ನೀಡಿರುವುದು ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ. ಇದೇ ಸಂದರ್ಭ ವರದಕ್ಷಿಣೆ ಕಿರುಕುಳ ಮತ್ತು ಪ್ರೇಮ ಹತ್ಯೆಗಳು ಹೆಚ್ಚಾಗುತ್ತಿದ್ದು ಸ್ವತಃ ಕುಟುಂಬಶ್ರೀ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಜಾಗೃತಿ ಮೂಡಿಸಲು ಪ್ರಯತ್ನಕ್ಕೆ ಸರ್ಕಾರ ಮುಂದಡಿಯಿರಿಸಿದೆ.
ಇಂದಿನಿಂದ ಮಹಿಳಾ ದಿನವಾದ ಮಾರ್ಚ್ 8ರವರೆಗೆ ನಡೆಯಲಿರುವ ಮಹಿಳಾ ನವ ಕೇರಳ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಸ್ಥಳೀಯಾಡಳಿತ ಇಲಾಖೆ ಮತ್ತು ಕುಟುಂಬಶ್ರೀ ಮೂರು ಲಕ್ಷಕ್ಕೂ ಹೆಚ್ಚು ನೆರೆಹೊರೆಯ ಕಾರ್ಯಕರ್ತರನ್ನು ಒಳಗೊಂಡು ಮನೆ-ಮನೆಗೆ ಮಾಹಿತಿ ಮತ್ತು ಜಾಗೃತಿ ಅಭಿಯಾನವನ್ನು ನಡೆಸಲು ಯೋಜಿಸುತ್ತಿದೆ. ನಿಮಿಷಾ ಸಜಯನ್ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

