HEALTH TIPS

ಏಲಿಯನ್‌ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್‌!

          ನ್ಯೂಯಾರ್ಕ್‌: ಏಲಿಯನ್‌ ಮತ್ತು ಹಾರುವ ತಟ್ಟೆಗಳ ಬಗ್ಗೆ ದಶಕಗಳಿಂದಲೂ ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವರು ಇವೆರಡನ್ನೂ ತಾವು ಕಂಡಿರುವುದಾಗಿ ಹೇಳಿದರೆ, ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ ಇನ್ನು ಕೆಲವರು. 2020ರಲ್ಲಿ ಬಾಹ್ಯಾಕಾಶ ಯಾನ ಮುಗಿಸಿ ಬಂದ ಮೊದಲ ಬ್ರಿಟಿಷ್ ಗಗನಯಾತ್ರಿ ಡಾ.     ಹೆಲೆನ್ ಶರ್ಮಾನ್ ಈ ಹಿಂದೆ ಅನ್ಯಗ್ರಹ ಜೀವಿಗಳು ಇದ್ದಿರುವುದು ಸತ್ಯ, ಏಲಿಯನ್‌ಗಳು ನಮ್ಮ ನಡುವೆ ಜೀವಿಸುತ್ತಿದ್ದರೂ ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು ಎಂದು ಹೇಳಿದ್ದರು.

          ಅದೇನೇ ಇದ್ದರೂ ಇದೀಗ ಏಲಿಯನ್‌ ರೀತಿ ಹೋಲುವ ಜೀವಿಗಳನ್ನು ಪೈಲಟ್‌ಗಳು ಕಂಡಿರುವುದಾಗಿ ವರದಿಯಾಗಿದೆ. ಮಾತ್ರವಲ್ಲದೇ ಇವುಗಳ ವಿಡಿಯೋ ಕೂಡ ಮಾಡಲಾಗಿದೆ.
ಪೆಸಿಫಿಕ್‌ ಮಹಾಸಾಗರದ ಮೇಲೆ ಏಲಿಯನ್‌ಗಳು ಹಾರಾಟ ನಡೆಸುತ್ತಿರುವುದನ್ನು ತಾವು ನೋಡಿರುವುದಾಗಿ ಪೈಲಟ್‌ ಹೇಳಿದ್ದಾರೆ. ಇದು ಹಾರುವ ತಟ್ಟೆಗಳೂ ಆಗಿರಬಹುದು ಎಂದೂ ಊಹಿಸಲಾಗಿದೆ. ಈ ಕುರಿತಾದ ವಿಡಿಯೋ ಅನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ.



          ಶಂಕಿತ ಅನ್ಯಗ್ರಹ ಜೀವಿಗಳ ವಿಮಾನವು ಚಲಿಸುತ್ತಿದ್ದು, ಅದರ ದೀಪಗಳು ಮಾತ್ರ ಉರಿಯುತ್ತಿರುವ ದೃಶ್ಯವನ್ನು ನಾವು ನೋಡಿದೆವು. ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಡುತ್ತಿರುವ ದೀಪಗಳು ಮಾತ್ರ ಕಾಣುತ್ತಿದೆ. ಆದರೆ, ಇದು ಅನ್ಯಜೀವಿಗಳು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇವು ನಿಜಕ್ಕೂ ಏಲಿಯನ್‌ಗಳದ್ದಾ ಅಥವಾ ಬೇರೆ ಏನಾದರೂ ಜೀವಿಗಳಿರಬಹುದೇ ಎಂಬುವ ಬಗ್ಗೆ ತಿಳಿಯಲಿಲ್ಲ ಎಂದು ಅವರು ಹೇಳಿದ್ದಾರೆ.ವಿಡಿಯೋವನ್ನು 39 ಸಾವಿ ಅಡಿ ಎತ್ತರದಲ್ಲಿ ಚಿತ್ರೀಕರಿಸಲಾಗಿದೆ.
            ಇದೀಗ ವೈರಲ್‌ ಆಗಿರುವ ವಿಡಿಯೋದಲ್ಲಿ ನಾವು ಬಿಳಿ ಬಣ್ಣದ ವಸ್ತುಗಳು ಹಾರಾಡುತ್ತಿರುವುದನ್ನು ನೋಡಬಹುದು. ಮೂರು ಸಾಲುಗಳಲ್ಲಿ ಇವು ಹಾರಾಟ ನಡೆಸುತ್ತಿವೆ. ಒಂದರಲ್ಲಿ ನಾಲ್ಕು ಚುಕ್ಕೆಗಳು ಕಂಡು ಬಂದರೆ, ಮತ್ತೆ ಎರಡರಲ್ಲಿ ಮೂರು ಚುಕ್ಕೆಗಳು ಕಂಡು ಬಂದಿವೆ. ಸ್ವಲ್ಪ ಹಾರಾಟದ ನಂತರ ಇವು ಮೋಡದ ಮರೆಯಲ್ಲಿ ಕಣ್ಮರೆಯಾಗಿದೆ.
            ಕೆಲವರು ಇದು ಏಲಿಯನ್ನೂ ಅಲ್ಲ, ಹಾರುವ ತಟ್ಟೆಯೂ ಅಲ್ಲ, ಯಾವುದೇ ಜೀವಿಯ ಅಲ್ಲ, ಯುದ್ಧನೌಕೆಯಿಂದ ಹೊಡೆದ ಕ್ಷಿಪಣಿಗಳಾಗಿರಬಹುದು ಎಂದು ವಾದಿಸುತ್ತಿದ್ದಾರೆ. ಕೆಲವು ಮಂದಿ ಶಂಕಿಸಿದ್ದಾರೆ. ಪಂಜಾಬ್‌ನಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಆಕಾಶದಲ್ಲಿ ಪ್ರಕಾಶಮಾನವಾದ ದೀಪಗಳ ನಿಗೂಢ ರೇಖೆಯನ್ನು ನೋಡಿದ್ದಾಗಿ ಹೇಳಿದ್ದರು. ಬಳಿಕ ಅದು ಉಪಗ್ರಹ ಎಂದು ತಿಳಿದುಬಂದಿತ್ತು. ಅದೇ ರೀತಿ ಇದರ ವಿವರ ಇನ್ನಷ್ಟೇ ಹೊರಬರಬೇಕಿದೆ.

ಇಲ್ಲಿದೆ ನೋಡಿ ವಿಡಿಯೋ:

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries