ಬದಿಯಡ್ಕ: ಮಹಿಳಾ ದೌರ್ಜನ್ಯ ಹಾಗೂ ವರದಕ್ಷಿಣೆಯ ವಿರುದ್ಧ ಜನಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಕಲ್ಲಕಟ್ಟ ಕೆ. ಜಿ. ಭಟ್ ಗ್ರಂಥಾಲಯದಲ್ಲಿ ವಿಚಾರಸಂಕಿರಣ ನಡೆಯಿತು. ತಾಲೂಕು ಗ್ರಂಥಾಲಯ ಕಾರ್ಯದರ್ಶಿ ದಾಮೋದರನ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು. ಗ್ರಂಥಾಲಯ ಕಾರ್ಯದರ್ಶಿ ಕರ್ನೆಲಿಯಸ್ ಲೋಬೊ ಸ್ವಾಗತಿಸಿ, ಶಾಲಿನಿ ರೋಡ್ರಿಗಸ್ ವಂದಿಸಿದರು. ವೇಣುಗೋಪಾಲ ಕಾರ್ಯಕ್ರಮ ನಿರೂಪಿಸಿದರು.




