ಬದಿಯಡ್ಕ: ಅಧ್ಯಾಪಕ ಸಂಘಟನೆಯಾದ ಕೆ.ಪಿ.ಎಸ್.ಟಿ.ಎ. ಬದಿಯಡ್ಕ ಶಾಖಾ ಸಮ್ಮೇಳನ ಚೇಡಿಕ್ಕಾನ ಶಾಲೆಯಲ್ಲಿ ಜರಗಿತು.ಸಮ್ಮೇಳನವನ್ನು ಸಂಘಟನೆಯ ಜಿಲ್ಲಾ ಕೋಶಾಧಿಕಾರಿ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ, ಮುಖ್ಯೋಪಾಧ್ಯಾಯಿನಿ ಸವಿತಾ ಟೀಚರ್ ಶುಭಾಶಂಸನೆಗೈದರು. ಸಮ್ಮೇಳನದಲ್ಲಿ ಚರ್ಚಾಗೋಷ್ಠಿ, ಸಂಘಟನಾ ಚರ್ಚೆ ನಡೆಯಿತು. ಕಾರ್ಯದರ್ಶಿ ರಾಧಾಕೃಷ್ಣನ್ ಸ್ವಾಗತಿಸಿ, ಬದಿಯಡ್ಕ ಶಾಖೆ ಕಾರ್ಯದರ್ಶಿ ರಿಶಾದ್ ಮಾಸ್ತರ್ ವಂದಿಸಿದರು. ನೂತನ ಬ್ರಾಂಚ್ ಸಮಿತಿಯನ್ನು ರಚಿಸಲಾಯಿತು.

