HEALTH TIPS

#MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!

           ಬೆಂಗಳೂರು: ಇತ್ತೀಚೆಗೆ ಬಹಳಷ್ಟು ತಾರಾಜೋಡಿಗಳು ವಿಚ್ಛೇದನ ಪಡೆಯುತ್ತಿರುವುದು ಹೆಚ್ಚಾಗಿದೆ. ಮೊನ್ನೆಮೊನ್ನೆಯಷ್ಟೇ ಧನುಷ್​-ಐಶ್ವರ್ಯಾ ಜೋಡಿ ಡೈವೋರ್ಸ್ ಪಡೆದಿದ್ದು ಅದಕ್ಕೆ ತಾಜಾ ಉದಾಹರಣೆ. ಇವರಿಬ್ಬರ ವಿಚ್ಛೇದನದ ಬೆನ್ನಿಗೇ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಟ್ವೀಟ್ ಮಾಡಿ, ಮದುವೆ ಎಂಬ ವ್ಯವಸ್ಥೆಯನ್ನೇ ಟೀಕಿಸಿದ್ದರು.

         ಮಾತ್ರವಲ್ಲ, ಈ ವಿಚ್ಛೇದನಗಳು ಯುವಕರಿಗೆ ಮದುವೆಯ ಅಪಾಯದ ಕುರಿತ ಎಚ್ಚರಿಕೆ ಗಂಟೆಗಳು ಎಂದೂ ಹೇಳಿದ್ದರು. ಹೀಗೆ ಮದುವೆಯನ್ನು ವಿರೋಧಿಸಿ ಅವರು ಸರಣಿ ಟ್ವೀಟ್ ಮಾಡಿದ್ದರು. ಅದರ ಬೆನ್ನಿಗೇ ಇದೀಗ ಮ್ಯಾರೇಜ್ ಸ್ಟ್ರೈಕ್ (#MarriageStrike) ಎಂಬ ಹೆಸರಲ್ಲಿ ಮದುವೆ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ವಿಶೇಷವೆಂದರೆ ಈ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಇದು ಟ್ವಿಟರ್​ನಲ್ಲಿ ಇಂಡಿಯಾ ಟ್ರೆಂಡಿಂಗ್ ಕೂಡ ಆಗಿದೆ.


           ಮೆನ್ಸ್​ ರೈಟ್ಸ್ ಆಯಕ್ಟಿವಿಸ್ಟ್ಸ್ ಮತ್ತು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್​ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಮದುವೆಯಾಗಿ ಅನ್ಯಾಯವಾಗಿ ಸಮಸ್ಯೆಗೆ ಸಿಲುಕಿಕೊಳ್ಳುವ ಬದಲು ಮದುವೆ ಆಗದಿರುವುದೇ ಒಳಿತು ಎಂಬ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಜೀವನಾಂಶಕ್ಕಾಗಿ ಪುರುಷರ ವಿರುದ್ಧ ಸುಳ್ಳುಕೇಸ್​ಗಳನ್ನು ಹಾಕಲಾಗುತ್ತಿದೆ. ಮತ್ತೊಂದೆಡೆ ಕಾನೂನು-ವ್ಯವಸ್ಥೆಯಲ್ಲೂ ಪುರುಷರ ರಕ್ಷಣೆಗೆ ಆದ್ಯತೆ ಇಲ್ಲ. ಅದಕ್ಕಾಗಿ ಮದುವೆಯನ್ನೇ ವಿರೋಧಿಸೋಣ ಎಂದು ಬಹಳಷ್ಟು ಪುರುಷರು #MarriageStrike ಹ್ಯಾಷ್​ಟ್ಯಾಗ್​ನೊಂದಿಗೆ ತಮ್ಮ ಅಭಿಪ್ರಾಯ, ಅನಿಸಿಕೆ, ಅಭಿಮತಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಇದು ಟ್ರೆಂಡಿಂಗ್ ಆಗಿದೆ.

       2014ರಲ್ಲಿ ದೆಹಲಿ ಮಹಿಳಾ ಆಯೋಗ ಸಲ್ಲಿಸಿದ ವರದಿ ಪ್ರಕಾರ 2013 ಏಪ್ರಿಲ್​ನಿಂದ 2014ರ ಜುಲೈ ವರೆಗೆ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ಶೇ.53.2 ಸುಳ್ಳು ದೂರುಗಳು ಎಂದು ಉಲ್ಲೇಖಿಸಲಾಗಿದೆ. ಇನ್ನು ಇತ್ತೀಚಿನ ಎನ್​ಸಿಆರ್​ಬಿ ವರದಿ ಪ್ರಕಾರ ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಬ್ಬ ಪುರುಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

       ಎನ್​ಸಿಆರ್​ಬಿ ಮಾಹಿತಿ ಪ್ರಕಾರ ದೇಶದಲ್ಲಿ ದಾಖಲಾಗಿರುವ 38,947 ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚೂಕಡಿಮೆ ಕಾಲುಭಾಗ ಅಂದರೆ 10,068 ಕೇಸ್​ಗಳಲ್ಲಿ ಮದುವೆಯ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇದಲ್ಲಿ ಪಾಲಕರು ತಮ್ಮ ಪುತ್ರಿಯ ಅನೈತಿಕ ಸಂಭೋಗ ಮುಚ್ಚಿಡುವ ಸಲುವಾಗಿ ಹೀಗೆ ಸುಳ್ಳು ದೂರು ದಾಖಲಿಸಿರುವುದೇ ಹೆಚ್ಚು ಎಂಬಿತ್ಯಾದಿ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತ ಈ ಅಭಿಯಾನ ನಡೆಸಲಾಗುತ್ತಿದೆ. ಮತ್ತೊಂದೆಡೆ ಕೆಲವರು ಅದೇ ಹ್ಯಾಷ್​ಟ್ಯಾಗ್ ಮೂಲಕ ಈ ಅಭಿಯಾನ ನಡೆಸುತ್ತಿರುವವರ ಕುರಿತು ವ್ಯಂಗ್ಯವಾಡಿದ್ದೂ ಅಲ್ಲಲ್ಲಿ ಕಂಡುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries